Select Your Language

Notifications

webdunia
webdunia
webdunia
webdunia

ತರಬೇತಿ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟ ದ.ಆಫ್ರಿಕಾ ಕ್ರಿಕೆಟ್ ಆಟಗಾರ

ತರಬೇತಿ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟ ದ.ಆಫ್ರಿಕಾ ಕ್ರಿಕೆಟ್ ಆಟಗಾರ
ಅಲೈಸ್: , ಗುರುವಾರ, 21 ಏಪ್ರಿಲ್ 2016 (13:19 IST)
ಪೂರ್ವ ಕೇಪ್‌ಟೌನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ದಕ್ಷಿಣ ಆಫ್ರಿಕಾ ಕ್ರಿಕೆಟರ್  ಲುಕಾನ್ಯಾ ಸಿಕಿ ಶಂಕಿತ ಹೃದಯವೈಫಲ್ಯದಿಂದ ಕುಸಿದುಬಿದ್ದು ಸತ್ತಿರುವ ಘಟನೆ ಸಂಭವಿಸಿದೆ.

22 ವರ್ಷದ ಲುಕಾನ್ಯಾ ಸಿಕಿ ಸೋಮವಾರ ಫೋರ್ಟ್ ಹೇರ್ ಅಕಾಡೆಮಿಯ  ಫಿಟ್‌ನೆಸ್ ಪರೀಕ್ಷೆಗಳಲ್ಲಿ ಭಾಗವಹಿಸಿದ್ದಾಗ ಅವರ ತಂಡ ಅಭ್ಯಾಸಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾಗ  ದಿಢೀರನೇ ಕುಸಿದುಬಿದ್ದರು.  ಅಕಾಡೆಮಿಯನ್ನು ಮಾಜಿ ದಕ್ಷಿಣ ಆಫ್ರಿಕಾ ಟೆಸ್ಟ್ ವೇಗದ ಬೌಲರ್ ಫುನೆಕೊ ಗಾಂ ನಡೆಸುತ್ತಿದ್ದಾರೆ. 
 
ಲುಕಾನ್ಯಾ ಸಿಕಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಅವರು 20ರವರೆಗೆ ಬಹುಹಂತದ ಫಿಟ್ನೆಸ್ ಪರೀಕ್ಷೆಗೆ ಒಳಪಡುವ ಸಾಮರ್ಥ್ಯ ಹೊಂದಿದ್ದರು. ಅವರು 17ರವರೆಗೆ ಓಡಿ ಮುಗಿಸಿದ ಬಳಿಕ ಶರ್ಟ್ ಬಿಟ್ಟಿ ತಮ್ಮ ಸಹಆಟಗಾರರ ಜತೆ ಕುಳಿತಿದ್ದವರು ಕೆಮ್ಮುತ್ತಾ ಕುಸಿದುಬಿದ್ದರು. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ತುಂಬ ತಡವಾಗಿತ್ತು ಎಂದು ಹೇಳಿದರು. 
 ಕ್ರಿಕೆಟ್ ಸೌತ್ ಆಫ್ರಿಕಾ ಚೀಫ್ ಎಕ್ಸಿಕ್ಯೂಟಿವ್ ಹರೂನ್ ಲಾರ್ಗಾಟ್ ಲುಕಾನ್ಯಾ ಕುಟುಂಬಕ್ಕೆ ವಿಷಾದ ಸೂಚಿಸಿದ್ದು ಅದನ್ನು ಆಘಾತಕಾರಿ ಸುದ್ದಿ ಎಂದು ಹೇಳಿದ್ದಾರೆ.

ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada