Webdunia - Bharat's app for daily news and videos

Install App

ಭಾರತದ ಕ್ರಿಕೆಟ್ ಹಣೆಬರಹ ಬದಲಾಯಿಸಿದ ಪ್ರಿನ್ಸ್ ಸೌರವ್ ಗಂಗೂಲಿ

Webdunia
ಶುಕ್ರವಾರ, 8 ಜುಲೈ 2016 (14:09 IST)
90ರ ದಶಕದಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ ಭಾರತದ ಕ್ರಿಕೆಟ್ ತಂಡ ಸ್ವದೇಶದಲ್ಲಿ ಹುಲಿಗಳು ಮತ್ತು ವಿದೇಶದಲ್ಲಿ ಕುರಿಗಳು ಎಂಬ ಕುಖ್ಯಾತಿ ಗಳಿಸಿತ್ತು.  ಸ್ವದೇಶದಲ್ಲಿ ಅತ್ಯುತ್ಕೃಷ್ಟ ಪ್ರದರ್ಶನಗಳನ್ನು ನೀಡುವ ತಂಡವು  ವಿದೇಶಗಳ ವೇಗದ, ಬೌನ್ಸಿ ಪಿಚ್‌ಗಳಲ್ಲಿ ಆಡಲಾಗದೇ ಮಣಿಯುತ್ತಿತ್ತು.
 
ಆದಾಗ್ಯೂ, ಒಬ್ಬ ವ್ಯಕ್ತಿ ಮಾತ್ರ ಭಾರತದ ಅದೃಷ್ಟವನ್ನು ಬದಲಾಯಿಸಲು ನಿರ್ಧರಿಸಿದರು. ಅವರು ಪ್ರಿನ್ಸ್ ಆಫ್ ಕೊಲ್ಕತಾ. ಅವರನ್ನು ದಾದಾ ಎಂದು ಅಚ್ಚುಮೆಚ್ಚಿನಿಂದ ಕರೆಯಲಾಗುತ್ತಿತ್ತು. ಅವರು ಆಕ್ರಮಣಕಾರಿ ಶೈಲಿಯ ಆಟದ ಸಂಕೇತವಾಗಿದ್ದರು. ಭಾರತ ಕ್ರಿಕೆಟ್ ಮನಸ್ಥಿತಿಯನ್ನು ಬದಲಾಯಿಸಿದ ರೀತಿಯಿಂದ ಸೌರವ್ ಗಂಗೂಲಿಯನ್ನು ಸದಾ ನೆನಪಿಸಿಕೊಳ್ಳಲಾಗುತ್ತದೆ. ವಿದೇಶದಲ್ಲಿ ಭಾರತದ ಕಳಪೆ ಪ್ರದರ್ಶನದ ದಾಖಲೆಯ ಸಮಸ್ಯೆಯನ್ನು ನಿಭಾಯಿಸಿದರು.
 
 ಗಂಗೂಲಿ 44 ವರ್ಷಗಳಿಗೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅವರು ನಾಯಕರಾಗಿ ಉಂಟುಮಾಡಿದ ಪರಿಣಾಮವನ್ನು ನೋಡಬೇಕು. 113 ಟೆಸ್ಟ್‌ಗಳಲ್ಲಿ ಗಂಗೂಲಿ 7213 ರನ್ ಮತ್ತು 311 ಏಕದಿನಗಳಲ್ಲಿ 11363 ರನ್ ಗಳಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಆಕ್ರಮಣಕಾರಿ ಶೈಲಿಯ ನಾಯಕತ್ವದ ಕಡೆ ಎಲ್ಲರೂ ಗಮನಹರಿಸಿದ್ದರು. ಆದರೆ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಕುರಿ ಎಂಬ ನಂಬಿಕೆಯನ್ನು ಗಂಗೂಲಿ ನುಚ್ಚುನೂರು ಮಾಡಿದ್ದನ್ನು ಕೆಲವೇ ಮಂದಿ ಒಪ್ಪಿದ್ದಾರೆ.
 
 ಕ್ರಿಕೆಟ್ ಅಭಿಮಾನಿಗಳಿಗೆ ನಂಬರ್ 11 ವಿಶೇಷ ಸ್ಥಾನಮಾನ ಹೊಂದಿದೆ. 2000-2005ರ ನಡುವಿನ ನಾಯಕತ್ವದ ಅವಧಿಯಲ್ಲಿ ಗಂಗೂಲಿ 28 ಟೆಸ್ಟ್‌ಗಳ ಪೈಕಿ ವಿದೇಶಗಳಲ್ಲಿ ಒಟ್ಟು 11 ಜಯಗಳನ್ನು ಗಳಿಸಿದ್ದಾರೆ. ಇದು  ಭಾರತದ ನಾಯಕ ಗಳಿಸಿದ ಅತ್ಯಧಿಕ ಜಯಗಳಾಗಿದೆ. ವಿದೇಶದಲ್ಲಿ ಅವರ ಗೆಲುವುಗಳ ಸಂಖ್ಯೆ ಮತ್ತು ಆ ಗೆಲುವುಗಳಿಗೆ ಅವರ ಕೊಡುಗೆ ಅವರನ್ನು ಶ್ರೇಷ್ಟ ನಾಯಕನನ್ನಾಗಿಸಿದೆ. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments