Webdunia - Bharat's app for daily news and videos

Install App

ಗ್ರೆಗ್ ಚಾಪೆಲ್ ನೇಮಕದ ತಪ್ಪನ್ನು ಪುನರಾವರ್ತನೆ ಮಾಡುವುದಿಲ್ಲ: ಗಂಗೂಲಿ

Webdunia
ಮಂಗಳವಾರ, 21 ಜೂನ್ 2016 (18:19 IST)
ಭಾರತದ ಮುಂದಿನ ಕೋಚ್ ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿರುವ ಮಾಜಿ ನಾಯಕ ಸೌರವ್ ಗಂಗೂಲಿ, 2005ರಲ್ಲಿ ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಹೆಸರನ್ನು ಶಿಫಾರಸು ಮಾಡಿದಾಗ ಉಂಟಾದ ಪ್ರಮಾದವನ್ನು ಈಗ ಮಾಡುವುದಿಲ್ಲ ಎಂದು ಹೇಳಿದ್ದಾರೆ. ದೇಶದ ಕ್ರಿಕೆಟ್‌ನಲ್ಲಿ ಎರಡು ಪ್ರಕ್ಷುಬ್ಧ ವರ್ಷಗಳಲ್ಲಿ ಕಹಿ ಸಂಬಂಧವನ್ನು ಗಂಗೂಲಿ, ಚಾಪೆಲ್ ಹಂಚಿಕೊಂಡಿದ್ದರು. 
 
ನನಗೆ ಕೋಚ್ ಆಯ್ಕೆ ಮಾಡುವ ಅವಕಾಶ ಒಮ್ಮೆ ಸಿಕ್ಕಿತ್ತು. ಚಾಪೆಲ್ ಆಯ್ಕೆಯಲ್ಲಿ ನಾನು ಗೊಂದಲ ಮಾಡಿಕೊಂಡೆನೆಂದು ಭಾವಿಸಿದ್ದೇನೆ. ಈಗ ನನಗೆ ತಿರುಗಿ ಅವಕಾಶ ಸಿಕ್ಕಿದೆ ಎಂದು ತಮ್ಮ ಪುಸ್ತಕ ಎ ಸೆಂಚುರಿ ಈಸ್ ನಾಟ್ ಎನಫ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಗಂಗೂಲಿ ಹೇಳಿದರು.

ಕ್ರಿಕೆಟ್ ಸಲಹಾ ಸಮಿತಿ ಅದನ್ನು ಸರಿಯಾಗಿ ಮಾಡುತ್ತದೆಂದು ಅವರು ಆಶಿಸಿದರು. ಅದೃಷ್ಟವಶಾತ್ ನನಗೆ ಈ ಬಾರಿ ಸಚಿನ್, ಲಕ್ಷ್ಮಣ್ ಮತ್ತು ಅಜಯ್ ಶಿರ್ಕೆ ಮತ್ತು ಅನುರಾಗ್ ಠಾಕುರ್ ಬೆಂಬಲ ಸಿಕ್ಕಿದೆ. ಒಟ್ಟಾಗಿ ನಾವು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಎಂದು ಗಂಗೂಲಿ ಹೇಳಿದರು. 
 
ಜೀವನದಲ್ಲಿ ಯಾವುದೂ ಖಾತರಿಯಿರುವುದಿಲ್ಲ. 2 ವರ್ಷಗಳ ನಂತರ ಏನಾಗುತ್ತದೆಂದು ಯಾರಿಗೂ ಗೊತ್ತಿರುವುದಿಲ್ಲ. ನಾನು ಸಿಎಬಿ ಅಧ್ಯಕ್ಷ ಅಥವಾ ವಿಶ್ವ ಟ್ವೆಂಟಿ 20 ಫೈನಲ್‌ ಆಯೋಜಿಸುತ್ತೇವೆಂದು ಯಾರಿಗೂ ಗೊತ್ತಿರಲಿಲ್ಲ. ಜೀವನವೇ ಹಾಗೆ ಎಂದು ಗಂಗೂಲಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments