ನೇರಪ್ರಸಾರದಲ್ಲೇ ಸೆಹ್ವಾಗ್ ತಮಾಷೆಗೆ ಸಿಡಿದ ಮಾಜಿ ನಾಯಕ ಗಂಗೂಲಿ

Webdunia
ಸೋಮವಾರ, 19 ಜೂನ್ 2017 (09:02 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಕಾಮೆಂಟರಿ ಬಾಕ್ಸ್ ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಪಂದ್ಯಕ್ಕೆ ಮೊದಲು ಹಂಚಿಕೊಂಡ ಅಭಿಪ್ರಾಯ ಕೊಂಚ ಅತಿರೇಕಕ್ಕೆ ಪ್ರಸಂಗವೊಂದು ನಡೆದಿದೆ.

 
ಸೆಹ್ವಾಗ್ ತಮಾಷೆಯಾಗಿ ತಮ್ಮ ಕಾಮೆಂಟ್ ಹೇಳುತ್ತಾರೆ. ಅದೇ ರೀತಿ ಗಂಗೂಲಿಯನ್ನೂ ತಮಾಷೆ ಮಾಡಲು ಹೋಗಿ ಪೆಟ್ಟು ತಿಂದಿದ್ದಾರೆ. ವಿರಾಟ್ ಕೊಹ್ಲಿ ವಿಕೆಟ್ ನಡುವೆ ಚೆನ್ನಾಗಿ ಓಡಿ ರನ್ ಕದಿಯುತ್ತಾರೆ ಎಂದು ಸೆಹ್ವಾಗ್ ಹೇಳುತ್ತಾ, ತಮ್ಮ ಹಳೆಯ ಟೀಂ ಮೇಟ್ ಕೂಡಾ ವಿಕೆಟ್ ನಡುವೆ ಚೆನ್ನಾಗಿ ಓಡುತ್ತಿದ್ದರು ಎಂದು ತಮಾಷೆಯಾಗಿ ಗಂಗೂಲಿಗೆ ಹೇಳಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಂಗೂಲಿ, ಹೌದು ನಾನು ವಿಕೆಟ್ ನಡುವೆ ಚುರುಕಾಗಿ ಓಡುತ್ತಿದ್ದೆ ಎಂದರು. ಅದನ್ನು ತಮಾಷೆಯಾಗಿ ತೆಗೆದುಕೊಂಡ ಸೆಹ್ವಾಗ್, ಹೌದಾ? ನೀವು ಕೊಹ್ಲಿಗಿಂತಲೂ ಉತ್ತಮವಾಗಿ ಓಡುತ್ತಿದ್ದಿರೇ? ಎಂದು ಕಾಲೆಳೆದರು.

ಇದು ಗಂಗೂಲಿಗೆ ಪಥ್ಯವಾಗಲಿಲ್ಲ. ಹೀಗೇ ತಮಾಷೆಯಾಗಿಯೇ ಸಾಗಿದ ಇವರಿಬ್ಬರ ಸಂಭಾಷಣೆಗೆ ಕೊನೆಗೆ ಗಂಗೂಲಿ, ನೋಡಪ್ಪಾ ಇಲ್ಲದ್ದನ್ನೆಲ್ಲಾ ಹೇಳಬೇಡ. ಮುಂದೆ ನೀನು ನನ್ನ ಎದುರೇ ಕೋಚ್ ಹುದ್ದೆಗೆ ಸಂದರ್ಶನ ನೀಡಬೇಕು ಎಂದು ತೆರೆ ಎಳೆದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments