Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿ ಭುಜಕ್ಕೆ ಗಾಯ!

ಸೌರವ್ ಗಂಗೂಲಿ ಭುಜಕ್ಕೆ ಗಾಯ!
Kolkotta , ಸೋಮವಾರ, 5 ಡಿಸೆಂಬರ್ 2016 (10:28 IST)
ಕೋಲ್ಕೊತ್ತಾ: ಆಟದಿಂದ ನಿವೃತ್ತಿಯಾಗಿ ಎಷ್ಟೋ ಸಮಯವಾಗಿದೆ. ಐಪಿಎಲ್ ನಲ್ಲೂ ಆಡುತ್ತಿಲ್ಲ. ಬ್ಯಾಟ್ ಹಿಡಿಯುವುದನ್ನು ಬಿಟ್ಟು ವರ್ಷವೇ ಕಳೆದಿದೆ. ಎಲ್ಲೂ ಆಕ್ಸಿಡೆಂಟ್ ಮಾಡಿಕೊಂಡಿಲ್ಲ. ಆದರೂ ಸೌರವ್ ಗಂಗೂಲಿ ಭುಜಕ್ಕೆ ಗಾಯವಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡಬಹುದು.

ಗಂಗೂಲಿ ಗಾಯ ಮಾಡಿಕೊಂಡಿದ್ದು ನಿಜ. ಅದೂ ಕ್ರಿಕೆಟ್ ಆಡುವಾಗಲೇ. ಆದರೆ ಎಲ್ಲೋ ಮೈದಾನದಲ್ಲಿ ಯಾವುದೋ ಟೂರ್ನಿಯಲ್ಲಿ ಆಡುವಾಗ ಅಲ್ಲ. ಗಲ್ಲಿ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡುವಾಗ.

ಯಾಕೋ ಗಂಗೂಲಿಗೆ ಗಲ್ಲಿ ಹುಡುಗರು ಆಡುವಾಗ ಹಳೆಯ ದಿನಗಳು ನೆನಪಿಗೆ ಬಂತೇನೋ. ಅವರ ಜತೆ ಒಂದು ಕೈ ನೋಡೇ ಬಿಡುವ ಎಂಬ ಹುರುಪಿನಿಂದ ಬ್ಯಾಟ್ ಹಿಡಿದು ಬೀದಿಯಲ್ಲಿ ನಿಂತರು. ತಮ್ಮ ಮೆಚ್ಚಿನ ಶಾಟ್ ಗಳನ್ನೇ ಹೊಡೆದರು. ಅಕ್ಕ ಪಕ್ಕದ ಮನೆಯವರಿಗೆ ತಮ್ಮ ಕಿಟಿಕಿ ಗಾಜು ಒಡೆದರೆ ಎಂಬ ಭಯವಿದ್ದರೂ, ದಾದನ ಆಟವನ್ನು ನೋಡುತ್ತಾ ಚಪ್ಪಾಳೆ ತಟ್ಟಿದರು.

ಅಪರೂಪಕ್ಕೆ ಬ್ಯಾಟ್ ಹಿಡಿದ ಗಂಗೂಲಿ ಆಡುವ ಭರದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡರು. ಟೆನಿಸ್ ಬಾಲ್ ಆಗಿದ್ದರಿಂದ ಗಾಯ ಗಂಭೀರವಾಗಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಂಖೆಡೆ ಸ್ಟೇಡಿಯಂನ ಗುಟ್ಟು ರಟ್ಟು