Select Your Language

Notifications

webdunia
webdunia
webdunia
webdunia

ದ್ವಿಶತಕ ವೀರ ರೋಹಿತ್ ಶರ್ಮಾಗೆ ತನ್ನ ನಗ್ನ ಫೋಟೋ ಅರ್ಪಿಸಿದ ಮಾಜಿ ಪ್ರೇಯಸಿ ಸೋಫಿಯ ಹಯಾತ್

ದ್ವಿಶತಕ ವೀರ ರೋಹಿತ್ ಶರ್ಮಾಗೆ ತನ್ನ ನಗ್ನ ಫೋಟೋ ಅರ್ಪಿಸಿದ ಮಾಜಿ ಪ್ರೇಯಸಿ ಸೋಫಿಯ ಹಯಾತ್
ನವದೆಹಲಿ , ಶುಕ್ರವಾರ, 14 ನವೆಂಬರ್ 2014 (18:11 IST)
ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ವಿಶ್ವದಾಖಲೆಯ 264 ಗಳಿಸಿದ ರೋಹಿತ್ ಶರ್ಮರವರಿಗೆ ಸಾಮಾಜಿಕ ಮಾಧ್ಯಮಮಗಳ ಮೂಲಕ ಜಗತ್ತಿನ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಶಂಸೆ ದೊರೆತಿದೆ. ಅಂತೆಯೇ ಅವರ ಮಾಜಿ ಗೆಳತಿ ಸೋಫಿಯಾ ಹಯಾತ್ ಅವರ ಕಡೆಯಿಂದ ಕೂಡ ಒಂದು ಅನನ್ಯ ಮೆಚ್ಚುಗೆ ವ್ಯಕ್ತವಾಗಿದೆ. 

ತನ್ನ ಬೆತ್ತಲೆ ಫೋಟೋ ಒಳಗೊಂಡಿರುವ  ಪೋಸ್ಟಿಂಗ್‌ನಲ್ಲಿ ಸೋಫಿಯ ರೋಹಿತ್ ಶರ್ಮಾರ ಐತಿಹಾಸಿಕ ಸಾಧನೆಗಾಗಿ ನಾನು ಅವರಿಗೆ ನನ್ನ ನಗ್ನ ಫೋಟೋವನ್ನು ಅರ್ಪಿಸುತ್ತಿದ್ದೇನೆ. ಅವರದು ಅತ್ಯುತ್ತಮ ಸಾಧನೆ. ಭಾರತದ ಪಾಲಿಗೆ ಹೆಮ್ಮೆಯ ದಿನ ಎಂದು ಅವರು ಬರೆದಿದ್ದಾರೆ. 
 
ನನ್ನ ನಗ್ನ ಫೋಟೋವನ್ನು ಪ್ರಕಟಿಸುವುದರ ಮೂಲಕ  ರೋಹಿತ್ ಶರ್ಮಾನ ವಿಶ್ವದಾಖಲೆಯ ಸಾಧನೆಯನ್ನು ಸಂಭ್ರಮಿಸುತ್ತಿದ್ದೇನೆ. ರಾಕ್ ಆನ್ ಶರ್ಮಾ ಎಂದು ಅವರ ಮತ್ತೊಂದು ಟ್ವಿಟ್ ಹೇಳುತ್ತದೆ. 
 
ಕ್ರೀಡಾಪಟು ಅಥವಾ ತಂಡವೊಂದಕ್ಕೆಈ ರೀತಿಯಲ್ಲಿ ಅನನ್ಯವಾದ ಬೆಂಬಲ, ಶ್ಲಾಘನೆ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. 2011ರಲ್ಲಿ  ಭಾರತ ಶ್ರೀಲಂಕಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದರೆ ನಾನು ಬೆತ್ತಲೆಯಾಗುತ್ತೇನೆ ಎಂದು ಮಾಡೆಲ್ ಪೂನಮ್ ಪಾಂಡೆ ಘೋಷಿಸಿದ್ದರು. 
 
ಈ ಹುಚ್ಚುತನ ಜಾಗತಿಕ ಮಟ್ಟದಲ್ಲಿ ಸಹ ಕಂಡು ಬಂದಿದೆ. ಪೆರುಗ್ವೆದ ಲಾರಿಸ್ಸಾ ರಿಕ್ವೆಲ್ಮೆ ಮತ್ತು ಅರ್ಜೈಂಟೈನಾದ ಲುಸಿಆನೆ ಸಲಜರ್  ಈ ಹಿಂದೆ ತಮ್ಮ ಫುಟ್ಬಾಲ್ ತಂಡಗಳು ಫೀಫಾ ವಿಶ್ವ ಕಪ್ ಗೆದ್ದರೆ ನಗ್ನರಾಗುವುದಾಗಿ ಹೇಳಿಕೊಂಡಿದ್ದರು.

Share this Story:

Follow Webdunia kannada