Webdunia - Bharat's app for daily news and videos

Install App

20ರ ಯುವತಿಯನ್ನು ರಹಸ್ಯವಾಗಿ ಮದುವೆಯಾದ ಅಖ್ತರ್

Webdunia
ಗುರುವಾರ, 26 ಜೂನ್ 2014 (12:00 IST)
ಅಪಾಯಕಾರಿ ಬೌಲಿಂಗ್‌ಗೆ ಹೆಸರಾಗಿರುವ ಪಾಕಿಸ್ತಾನದ ವೇಗದ ಬೌಲರ್ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯಿಬ್ ಅಖ್ತರ್, 20 ವರ್ಷದ ರುಬಾಬ್ ಎಂಬ ಯುವತಿಯ ಜತೆ 25 ಜೂನ್ - ಬುಧವಾರ ವೈವಾಹಿಕ ಬಂಧನಕ್ಕೆ  ಒಳಗಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಆತನ ಸಿಕ್ರೆಟ್ ಮದುವೆಯ ಬಗ್ಗೆ ಈ ಮೊದಲೇ ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅಕ್ತರ್ ಇದನ್ನು ನಿರಾಕರಿಸಿದ್ದರು. 
 
ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಹರಿಪುರದ ರುಬಾಬ್ ಎಂಬಾಕೆ ಅಖ್ತರ್ ಕೈಹಿಡಿದ ಯುವತಿ. ಇತ್ತೀಚೆಗಷ್ಟೆ ಆಕೆ ಇಂಟರ್‌ಮೀಡಿಯಟ್ ಪರೀಕ್ಷೆ ಮುಗಿಸಿದ್ದಾಳೆ.
 
ಅತಿ ಸರಳ ಸರಳ ಸಮಾರಂಭದಲ್ಲಿ  ಪೋಷಕರು, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅಕ್ತರ್- ರುಬಾಬ್ ನಿಖಾ ನಡೆಯಿತು. 
 
ಜೂನ್ 12ರಂದು ಅಖ್ತರ್ ಮತ್ತು ಅವರ ಪೋಷಕರು ವಧುವಿನ ಮನೆಗೆ ಭೇಟಿ ನೀಡಿ ಮದುವೆ ದಿನಾಂಕ ಗೊತ್ತುಪಡಿಸಿದ್ದರು ಎಂದು  ಅಕ್ತರ್ ಅವರ ಹತ್ತಿರದ ಮೂಲಗಳು ಈ ಹಿಂದೆ ಪಿಟಿಐಗೆ  ಸುದ್ದಿಸಂಸ್ಥೆಗೆ ಖಚಿತ ಪಡಿಸಿದ್ದವು. 
 
ತನ್ನ ತಂದೆತಾಯಿಗಳು ನಿಗದಿ ಪಡಿಸಿದ ಹುಡುಗಿಯನ್ನು ಮದುವೆಯಾಗುತ್ತಿರುವುದರನ್ನು ಈ ಮೊದಲು ಅಖ್ತರ್ ಬಲವಾಗಿ ಅಲ್ಲಗಳೆದಿದ್ದರು.
 
ರುಬಾಬ್ ವಯಸ್ಸು ಕೇವಲ 17 ಎಂದು ಸಹ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಅಖ್ತರ್ ಹಕ್ ಮೆಹರ್ ಆಗಿ 5 ಲಕ್ಷ ರೂಪಾಯಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments