ಆಡದಿದ್ರೂ ಶಿಖರ್ ಧವನ್ ಗೆ ಗಾಯವಾಗಿದೆ ನೋಡಿ!

Webdunia
ಶನಿವಾರ, 21 ಜನವರಿ 2017 (09:33 IST)
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಿಗೆ ಗಾಯದಿಂದ ಚೇತರಿಸಿಕೊಂಡು ಶಿಖರ್ ಧವನ್ ತಂಡಕ್ಕೆ ಮರಳಿದ್ದರು. ನಂತರ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ನೋಡಿ!
 

ಎರಡನೇ ಏಕದಿನ ಪಂದ್ಯ ಮುಗಿದ ಕೂಡಲೇ ತಂಡದ ಇತರ ಸದಸ್ಯರೆಲ್ಲರೂ ಕೋಲ್ಕೊತ್ತಾಗೆ ಪ್ರಯಾಣ ಬೆಳೆಸಿದರೆ, ಧವನ್ ಮಾತ್ರ ಕೋಲ್ಕೋತ್ತಾದ ಆಸ್ಪತ್ರೆಗೆ ತೆರಳಿದ್ದಾರೆ. ಹಿಂದೆ  ಮುರಿತಕ್ಕೊಳಗಾಗಿದ್ದ ಹೆಬ್ಬೆರಳಿನ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆಯಂತೆ.

ಅದಕ್ಕಾಗಿ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಂಡು ವರದಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿರುವ ಧವನ್ ಗೆ ಈ ಗಾಯದ ಸಮಸ್ಯೆ ಬರೆ ಎಳೆದಂತಾಗಿದೆ. ಇದರಿಂದಾಗಿ ಮೂರನೇ ಏಕದಿನಕ್ಕೆ ಅವರ ಲಭ್ಯತೆ ಅನುಮಾನವಾಗಿದೆ. ಅತ್ತ ಇಂಗ್ಲೆಂಡ್ ತಂಡದಲ್ಲೂ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಚೆಂಡು ಕೈಗೆ ತಗುಲಿಸಿಕೊಂಡಿದ್ದ ಆರಂಭಿಕ ಅಲೆಕ್ಸ್ ಹೇಲ್ಸ್ ಸರಣಿಯಿಂದ ಔಟಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Video: ಕೆಸರನ್ನು ಲೆಕ್ಕಿಸದೆ ಬರಿಗಾಲದಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್‌- ಅನುಷ್ಕಾ ದಂಪತಿ

ಟೀಂ ಇಂಡಿಯಾ ಮುಂದಿನ ಸರಣಿಯ ವೇಳಾಪಟ್ಟಿ ಇಲ್ಲಿದೆ

ಅತ್ಯಾಚಾರ ಪ್ರಕರಣ: ದೆಹಲಿ ಕ್ಯಾಪಿಟಲ್ಸ್‌ ವಿಕೆಟ್ ಕೀಪರ್‌ ಅಭಿಷೇಕ್ ಪೊರೆಲ್‌ಗೆ ಬಂಧನ ಭೀತಿ

ಪ್ರಯಾಣದಲ್ಲಿ ದೊರೆತ ಅಭಿಮಾನಿಗಳ ಪ್ರೀತಿಯನ್ನು ಸ್ವೀಕರಿಸಿ, ವಿಶ್ರಾಂತಿ ಪಡೆಯಿರಿ: ಮೆಸ್ಸಿ ಆಟದ ಬಗ್ಗೆ ಬಿಗ್‌ಬಿ ಹೇಳಿದ್ದಿಷ್ಟು

ಮುಂದಿನ ಸುದ್ದಿ
Show comments