Select Your Language

Notifications

webdunia
webdunia
webdunia
webdunia

ಮಾರಿಯಾ ಶರಪೋವಾ ನನಗೆ ಅಗೌರವ ತೋರಿಲ್ಲ: ಸಚಿನ್ ತೆಂಡೂಲ್ಕರ್

ಮಾರಿಯಾ ಶರಪೋವಾ ನನಗೆ ಅಗೌರವ ತೋರಿಲ್ಲ: ಸಚಿನ್ ತೆಂಡೂಲ್ಕರ್
ನವದೆಹಲಿ , ಬುಧವಾರ, 23 ಜುಲೈ 2014 (15:28 IST)
ನಾನು ಕ್ರಿಕೆಟ್ ಆಟವನ್ನು ನೋಡುವುದಿಲ್ಲ ಮತ್ತು ಸಚಿನ್ ಅಂದರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದ  ಪ್ರಖ್ಯಾತ ಟೆನ್ನಿಸ್ ಆಟಗಾರ್ತಿ ಮಾರಿಯಾ ಶರಪೋವಾ ಅವರ ಹೇಳಿಕೆಯಿಂದ ನನಗೆ ಅಗೌರವ ತೋರಿದಂತಾಗಿಲ್ಲ ಎಂದು ಕ್ರಿಕೆಟ್ ದಂತಕಥೆ  ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 

ಖಾಸಗಿ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಸಚಿನ್, ಆಕೆ ಕ್ರಿಕೆಟ್‌ನ್ನು ನೋಡುವುದಿಲ್ಲವಾದ್ದರಿಂದ ಶರಪೋವಾರ ಹೇಳಿಕೆ ಅಗೌರವಯುತವಾಗಿಲ್ಲ ಎನ್ನುವುದರ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ.
 
ಇತ್ತೀಚಿಗೆ ನಡೆದ ವಿಂಬಲ್ಡನ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶರಪೋವಾ, ಸಚಿನ್ ಅಂದರೆ ನನಗೆ ಯಾರೆಂದು ತಿಳಿದಿಲ್ಲ ಎಂದಿದ್ದು ಕ್ರಿಕೆಟ್ ದಿಗ್ಗಜನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆ ಕುರಿತು ವ್ಯಾಪಕ ಅಸಮಾಧಾನ ಪ್ರಕಟವಾಗಿತ್ತು.
 
ಚಾಂಪಿಯನ್‌ಶಿಪ್ ನಡೆಯುತ್ತಿದ್ದ ಸಂದರ್ಭದಲ್ಲಿ ಇಂಗ್ಲೆಂಡ್  ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್ ಜೊತೆಗೆ ತೆಂಡೂಲ್ಕರ್ ರಾಯಲ್ ಬಾಕ್ಸ್‌ನಲ್ಲಿದ್ದರು.
 
ಶರಪೋವಾರ ಹೇಳಿಕೆಯಿಂದ ಕೋಪಗೊಂಡಿದ್ದ ಸಚಿನ್ ಅಭಿಮಾನಿಗಳಿಂದ ಅಪಾರ ಸಂಖ್ಯೆಯ  ಕಟುವಾದ ಸಂದೇಶಗಳು ಶರಪೋವಾರ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಖಾತೆಗೆ ಹರಿದು ಬಂದಿದ್ದು, ಈ ಕುರಿತು ಟೆನ್ನಿಸ್ ಆಟಗಾರ್ತಿ ಮೌನಕ್ಕೆ ಶರಣು ಹೋಗಿದ್ದರು. 
 
ವಿಂಬಲ್ಡನ್ ಸಮಯದಲ್ಲಿ ತೆಂಡೂಲ್ಕರ್ ರಾಯಲ್ ಬಾಕ್ಸ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಕೆಲವು  ತಿಂಗಳುಗಳ ಹಿಂದೆ ತಾವು ಭಾರತೀಯ ಸೂಪರ್‌ಸ್ಟಾರ್ ಸಚಿನ್ ಜತೆ ಕ್ಲಿಕ್ಕಿಸಿದ್ದ ಫೋಟೋವೊಂದನ್ನು  ಸ್ವಿಸ್ ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಷ್ಟ್ ಮಾಡಿದ್ದರು. 

Share this Story:

Follow Webdunia kannada