Select Your Language

Notifications

webdunia
webdunia
webdunia
webdunia

ಮತ್ತೆ ಅಪ್ಪನಾಗಲು ನಿರಾಕರಿಸಿದ ವಾರ್ನ್

ಮತ್ತೆ ಅಪ್ಪನಾಗಲು ನಿರಾಕರಿಸಿದ ವಾರ್ನ್
ಲಂಡನ್ , ಭಾನುವಾರ, 2 ನವೆಂಬರ್ 2014 (11:56 IST)
ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೆನ್ ವಾರ್ನ್ ಪ್ಲೇಬಾಯ್ ರೂಪದರ್ಶಿ ಎಮಿಲಿ ಸ್ಕಾಟ್ ಜೊತೆಗಿನ ಗೆಳೆತನವನ್ನು ಮೂರೇ ತಿಂಗಳಲ್ಲಿ ತೊರೆದಿದ್ದಾರೆ.

ಸದಾ ಸುದ್ದಿಯಲ್ಲಿರುವ ವಾರ್ನ್ ಈಗ ಮತ್ತೊಮ್ಮೆ ರೂಪದರ್ಶಿ ಎಮಿಲಿ ಸ್ಕಾಟ್ ಜೊತೆಗಿನ ಗೆಳೆತನವನ್ನು ತೊರೆದು ಮತ್ತೆ ಸುದ್ದಿಯಾಗುತ್ತಿದ್ದಾರೆ. ಈ ಗೆಳೆತನ ತೊರೆಯಲು ಕಾರಣ ಎಮಿಲಿಗೆ ತಾಯಿಯಾಗುವ ಆಸೆಯಂತೆ...!! ಆದರೆ ವಾರ್ನ್‌ಗೆ ಅಪ್ಪನಾಗುವ ಆಸೆಯಿಲ್ಲವಂತೆ...!!
 
ಈಗಾಗಲೇ ಮೊದಲ ಪತ್ನಿಯಿಂದ ಮೂರು ಮಕ್ಕಳ ತಂದೆಯಾಗಿರುವ ವಾರ್ನ್‌ಗೀಗ 45 ವರ್ಷ. ಆದರೆ, ಅವರಿಗಿಂತ 15 ವರ್ಷ ಕಿರಿಯಳಾಗಿರುವ ಎಮಿಲಿಗೆ ತಾಯಿಯಾಗುವ ಬಯಕೆ.
 
`ಆಕೆ ಕೂಲ್, ಸುಂದರ, ಸೆಕ್ಸಿ, ಲವ್ಲಿ ಹುಡುಗಿ. ಆದರೆ ದುರದೃಷ್ಟವೆಂದರೆ ಆಕೆ ಜೀವನದ ಬೇರೊಂದು ಘಟ್ಟದಲ್ಲಿದ್ದಾಳೆ. ಹೀಗಾಗಿ ಅವಳಿಂದ ನಾನು ದೂರವಾಗಿದ್ದು, ಪರಸ್ಪರ ದೂರವಾಗಿದ್ದೇವೆ. ಆದರೆ, ನಮ್ಮ ಗೆಳೆತನ ಮಾತ್ರ ಯಾವತ್ತೂ ಉಳಿಯುತ್ತದೆ' ಎಂದು ವಾರ್ನ್ ಹೇಳಿದ್ದಾರೆ. 
 
ಈ ಮೊದಲು ಬ್ರಿಟಿಷ ನಟಿ ಎಲಿಜಿಬಿತ್ ಹರ್ಲಿ ಜತೆ ಗೆಳೆತನ ಹೊಂದಿದ್ದ ವಾರ್ನ್ ಆಕೆ ಮದುವೆಯಾಗಲು ಬಯಸಿದಾಗ ಬೇರ್ಪಟ್ಟಿದ್ದರು. ಈಗ ಎಮಿಲಿಗೂ ಕೈಕೊಟ್ಟಿರುವ ವಾರ್ನ್ ಟ್ವಿಟರ್‌ನಲ್ಲಿ `ನಾನಿನ್ನು ಯಾರೊಂದಿಗೆ ಡೇಟಿಂಗ್ ನಡೆಸಲಿ' ಎಂದು ತಮ್ಮ ಹಿಂಬಾಲಕರಲ್ಲಿ ಪ್ರಶ್ನಿಸಿದ್ದಾರೆ. 

Share this Story:

Follow Webdunia kannada