Select Your Language

Notifications

webdunia
webdunia
webdunia
webdunia

ಇದಪ್ಪಾ ಕ್ರಿಕೆಟಿಗ ಶಾಹಿದ್ ಅಫ್ರಿದಿ ದೇಶ ಪ್ರೇಮ!

ಇದಪ್ಪಾ ಕ್ರಿಕೆಟಿಗ ಶಾಹಿದ್ ಅಫ್ರಿದಿ ದೇಶ ಪ್ರೇಮ!
Karachi , ಸೋಮವಾರ, 2 ಜನವರಿ 2017 (11:46 IST)
ಕರಾಚಿ: ಎಲ್ಲರಿಗೂ ತಮ್ಮ ದೇಶವೆಂದರೆ ಅಭಿಮಾನವಿದ್ದೇ ಇರುತ್ತದೆ. ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡಾ ಇದಕ್ಕೆ ಹೊರತಲ್ಲ. ಅಫ್ರಿದಿ ತನ್ನ ದೇಶವನ್ನು ಜಗತ್ತಿನ ಅತ್ಯುತ್ತಮ ದೇಶವಾಗಿ ಮಾಡುವ ಪಣ ತೊಟ್ಟಿದ್ದಾರೆ.


ಇದು ಅಫ್ರಿದಿಯ ಹೊಸ ವರ್ಷದ ಪ್ರತಿಜ್ಞೆ. ಭಯೋತ್ಪಾದನೆಯ ಕಪಿ ಮುಷ್ಠಿಯಲ್ಲಿರುವ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲೂ ಜಗತ್ತಿನ ಇತರ ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನವನ್ನು ಸುರಕ್ಷಿತ ರಾಷ್ಟ್ರವಾಗಿಸುವ ಪಣ ತೊಟ್ಟಿದ್ದಾರೆ ಈ ಕ್ರಿಕೆಟಿಗ.

ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳ ಶುಭ ಹಾರೈಸಿದ ಅಫ್ರಿದಿ ಹೊಸ ವರ್ಷದಂದು ಇಂತಹದ್ದೊಂದು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ, ಇದು ಅಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತು. ಅಂತೂ ಅಫ್ರಿದಿ ದೇಶ ಉದ್ದಾರ ಮಾಡುವ ಮಾತನಾಡುತ್ತಾ, ಈಗಾಗಲೇ ರಾಜಕೀಯ ಸೇರಿ ದೇಶ ಪ್ರೇಮ ವ್ಯಕ್ತಪಡಿಸುವ ಇಮ್ರಾನ್ ಖಾನ್ ಸಾಲಿಗೆ ಸೇರಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಏಕದಿನ ಸರಣಿ ಆರಂಭಕ್ಕೂ ಮೊದಲೇ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಸಿಡಿಲು