Webdunia - Bharat's app for daily news and videos

Install App

ಬ್ರಿಟಿಷ್ ಪತ್ರಕರ್ತನಿಗೆ ಸೆಹ್ವಾಗ್ ಪಂಚ್!

Webdunia
ಸೋಮವಾರ, 24 ಜುಲೈ 2017 (10:03 IST)
ಲಂಡನ್: ಮತ್ತೆ ವೀರೇಂದ್ರ ಸೆಹ್ವಾಗ್ ಮತ್ತು ಬ್ರಿಟಿಷ್ ಪತ್ರಕರ್ತ ಪೀರ್ಸ್ ಮಾರ್ಗನ್ ನಡುವೆ ಟ್ವಿಟರ್ ಯುದ್ಧ ಪ್ರಾರಂಭವಾಗಿದೆ. ನಿನ್ನೆ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಹಿನ್ನಲೆಯಲ್ಲಿ ಸೆಹ್ವಾಗ್ ಪೀರ್ಸ್ ಗೆ ಸರಿಯಾಗಿಯೇ ಪಂಚ್ ಕೊಟ್ಟಿದ್ದಾರೆ.

 
ಫೈನಲ್ ಪಂದ್ಯದಲ್ಲಿ ಭಾರತ ಸೋತ ತಕ್ಷಣ ವೀರೇಂದ್ರ ಸೆಹ್ವಾಗ್ ರನ್ನು ಟ್ವಿಟರ್ ನಲ್ಲಿ ಕೆಣಕಿದ ಪೀರ್ಸ್ ‘ನೀವು ಚೆನ್ನಾಗಿದ್ದೀಯಲ್ವಾ ಗೆಳೆಯಾ ಸೆಹ್ವಾಗ್ ?’ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ತಕ್ಷಣ ತಕ್ಕ ಉತ್ತರ ಕೊಟ್ಟ ಸೆಹ್ವಾಗ್ ಪೀರ್ಸ್ ಗೆ ಮುಖಭಂಗ ಮಾಡಿದ್ದಾರೆ.

‘ನಾನು ಮತ್ತು ನನ್ನ ದೇಶದ ಕೋಟ್ಯಂತರ ಮಂದಿ ನಮ್ಮ ಮಹಿಳಾ ತಂಡದ ಬಗ್ಗೆ ಸೋಲಿನಲ್ಲಿಯೂ ಹೆಮ್ಮೆ ಪಡುತ್ತೇವೆ. ಅದನ್ನು ನೀವು ಕೂಡಾ ಮಾಡಲಾಗದು. ನಾವು ಚೆನ್ನಾಗಿಯೇ ಹೋರಾಡಿದ್ದೇವೆ. ಮತ್ತು ಇನ್ನಷ್ಟು ಚೆನ್ನಾಗಿ ನಿರ್ವಹಣೆ ತೋರುತ್ತೇವೆ. ಎಂಜಾಯ್’ ಎಂದುತ್ತರಿಸಿದ್ದಾರೆ.

ರಿಯೋ ಒಲಿಂಪಿಕ್ಸ್ ಸಂದರ್ಭದಲ್ಲಿ ಭಾರತೀಯರು ಏಕೈಕ ಬೆಳ್ಳಿ ಗೆದ್ದಿದ್ದಕ್ಕೆ ಇಷ್ಟೊಂದು ಸಂಭ್ರಮಿಸುತ್ತಿದ್ದಾರೆ ಎಂದು ಕುಹುಕವಾಡಿದ್ದ ಪೀರ್ಸ್ ಗೆ ಸೆಹ್ವಾಗ್ ಸರಿಯಾಗಿಯೇ ತಿರುಗೇಟು ನೀಡಿದ್ದರು. ಅಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಯಾವುದೇ ಪಂದ್ಯ ನಡೆದರೂ ಇವರಿಬ್ಬರ ನಡುವಿನ ಟ್ವಿಟರ್ ಚಕಮಕಿ ಮಜವಾಗಿರುತ್ತದೆ.

ಇದನ್ನೂ ಓದಿ..  ರಮಾನಾಥ್ ರೈ ಗೆ ಗೃಹಖಾತೆ? 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿದ್ದರೂ ಹಾರ್ದಿಕ್ ಪಾಂಡ್ಯಗೆ ಹಿಂಬಡ್ತಿ

Asia Cup: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ಮುಂದಿನ ಸುದ್ದಿ
Show comments