Webdunia - Bharat's app for daily news and videos

Install App

ಕೊಚ್ಚಿಯಲ್ಲಿ ಹೊಸ ಬಂಗಲೆ: ದಕ್ಷಿಣ ಭಾರತದಲ್ಲಿ ಸಚಿನ್ ಪ್ರಥಮ ನಿವಾಸ

Webdunia
ಶುಕ್ರವಾರ, 4 ಸೆಪ್ಟಂಬರ್ 2015 (11:54 IST)
ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್  ಸಚಿನ್ ತೆಂಡೂಲ್ಕರ್ ಕೇರಳದ ಕೊಚ್ಚಿಯಲ್ಲಿ  ಐಶಾರಾಮಿ ಬಂಗಲೆಯೊಂದನ್ನು ಖರೀದಿಸಲು ಸಿದ್ಧತೆ ನಡೆಸಿದ್ದಾರೆ.  ಸಚಿನ್ ಶನಿವಾರ ತಮ್ಮ ಹೊಸ ಬಂಗಲೆ ಪರಿಶೀಲನೆಗೆ ಆಗಮಿಸಲಿದ್ದಾರೆ. 
 
ಇದು ದಕ್ಷಿಣ ಭಾರತದಲ್ಲಿ ಸಚಿನ್ ಹೊಂದಿರುವ ಪ್ರಥಮ ನಿವಾಸವಾಗಲಿದೆ.
 
ರಾಷ್ಟ್ರೀಯ ತಂಡದಿಂದ ನಿವೃತ್ತರಾದ ಬಳಿಕ ಕೇರಳ ಸಚಿನ್ ಅವರ ಎರಡನೇ ಮನೆಯಂತಾಗಿದೆ.  ಇಂಡಿಯಾನ್ ಸೂಪರ್ ಲೀಗ್‍ನ ಫ್ರಾಂಚೈಸಿಯಾಗಿರುವ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕರಾಗಿರುವ ಸಚಿನ್  ದೇವರ ನಾಡಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಚ್ಚಿಯಲ್ಲಿ ಬಂಗಲೆಯನ್ನು ಖರೀದಿಸುತ್ತಿದ್ದಾರೆ. 
 
ನಿವಾಸದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಸಚಿನ್ ತಮ್ಮ ಹೊಸ ಮನೆಯನ್ನು ವೀಕ್ಷಿಸಲು ಬರಲಿದ್ದಾರೆ. 
 
ಅಂತರಾಷ್ಟ್ರೀಯ ಜಾಹಿರಾತು ಸಂಘ-ಭಾರತದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಸಚಿನ್  ಶುಕ್ರವಾರ ರಾತ್ರಿ ಕೇರಳಕ್ಕೆ ಆಗಮಿಸಲಿದ್ದಾರೆ. ಶನಿವಾರ ಕಾರ್ಯಕ್ರಮ ಮುಗಿದ ಬಳಿಕ ಅವರು ತಮ್ಮ ನೂತನ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments