Webdunia - Bharat's app for daily news and videos

Install App

ಸಚಿನ್ ತೆಂಡೂಲ್ಕರ್ ವಿಸ್ಮಯಕಾರಿ ಪ್ರತಿಭಾಶಾಲಿ: ಅಲಸ್ಟೈರ್ ಕುಕ್

Webdunia
ಗುರುವಾರ, 9 ಜೂನ್ 2016 (10:43 IST)
ಬ್ಯಾಟಿಂಗ್ ಗ್ರೇಟ್ ಸಚಿನ್ ತೆಂಡೂಲ್ಕರ್ ಅವರ 10,000 ರನ್ ದಾಖಲೆಯ ಗಡಿಯನ್ನು ದಾಟಿದರೂ ಟೆಸ್ಟ್ ರನ್‌ಗಳ ಸರ್ವಕಾಲಿಕ ದಾಖಲೆ ಸಮೀಪಿಸಬೇಕಾಗಿದ್ದು, ಇನ್ನೂ ಗೋಚರಿಸಿಲ್ಲ ಎಂದು   ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್  ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 9 ವಿಕೆಟ್ ಜಯದ ಸಂದರ್ಭದಲ್ಲಿ ಕುಕ್ ಇತಿಹಾಸದಲ್ಲಿ  10,000 ಟೆಸ್ಟ್ ರನ್ ಸ್ಕೋರ್ ಮಾಡಿದ 12ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 
ಅತೀ ಕಿರಿಯ ವಯಸ್ಸಾದ 31 ವರ್ಷ 157 ದಿನಗಳಲ್ಲಿ ಈ ಸಾಧನೆ ಮಾಡಿ ಮೊದಲ ಇಂಗ್ಲಿಷ್ ಆಟಗಾರ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದು, ತೆಂಡೂಲ್ಕರ್ ಅವರ ದಾಖಲೆಯನ್ನು 5 ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಮುರಿದಿದ್ದಾರೆ.
 
 ಕುಕ್ (128 ಟೆಸ್ಟ್‌ಗಳಲ್ಲಿ 10,042 ರನ್)  ತೆಂಡೂಲ್ಕರ್ ಅವರ 200 ಟೆಸ್ಟ್‌ಗಳಿಂದ 15,921 ಒಟ್ಟು ರನ್ ದಾಖಲೆಯನ್ನು ಮುರಿಯಲು ಇನ್ನೂ 6000 ರನ್ ಕೊರತೆ ಹೊಂದಿದ್ದಾರೆ. ಇಂಗ್ಲೆಂಡ್ ನಾಯಕ 28 ಟೆಸ್ಟ್ ಶತಕಗಳನ್ನು ಬಾರಿಸಿ ಸರಾಸರಿ 47ರಲ್ಲಿದ್ದರೆ, ತೆಂಡೂಲ್ಕರ್ 51 ಶತಕಗಳೊಂದಿಗೆ 54 ಸರಾಸರಿ ಹೊಂದಿದ್ದಾರೆ.
 
 6000 ರನ್‌ಗಳು ಇನ್ನೂ ದೂರದಲ್ಲಿದೆ ಎಂದು ಲಾರ್ಡ್ಸ್‌ನಲ್ಲಿ ಮಾತನಾಡುತ್ತಾ ಕುಕ್ ಹೇಳಿದರು. ಈ ದಾಖಲೆಯನ್ನು ವಿಸ್ಮಯಕಾರಿ ಪ್ರತಿಭಾಶಾಲಿ ಸಚಿನ್ ನಿರ್ಮಿಸಿದ್ದಾರೆ. ನಾನು ಪ್ರತಿಭಾಶಾಲಿಯಲ್ಲ, ಆದ್ದರಿಂದ ಇದು ಇನ್ನೂ ದೂರದಲ್ಲಿದೆ ಎಂದು ಕುಕ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments