Select Your Language

Notifications

webdunia
webdunia
webdunia
webdunia

ಆರ್‌ಸಿಬಿ ಸೋಲಿಗೆ ಸಚಿನ್ ಬೇಬಿ ಕಣ್ಣೀರ ಧಾರೆ

ಆರ್‌ಸಿಬಿ ಸೋಲಿಗೆ ಸಚಿನ್ ಬೇಬಿ ಕಣ್ಣೀರ ಧಾರೆ
ನವದೆಹಲಿ: , ಸೋಮವಾರ, 30 ಮೇ 2016 (20:10 IST)
ಸನ್ ರೈಸರ್ಸ್ ಬೌಲರ್‌ಗಳು ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಔಟಾದ ಬಳಿಕ ಬಿಗಿ ಬೌಲಿಂಗ್ ಪ್ರದರ್ಶನ ನೀಡಿದರು. ಸ್ಟುವರ್ಟ್ ಬಿನ್ನಿ ಮತ್ತು ಸಚಿನ್ ಬೇಬಿ ಬೌಂಡರಿಯಾಚೆ ಕೆಲವು ಶಾಟ್‌ಗಳ ಮೂಲಕ ಆರ್‌ಸಿಬಿ ಗೆಲುವನ್ನು ಜೀವಂತವಾಗಿರಿಸಿದ್ದರು. 
 
ಆದರೆ ಭುವನೇಶ್ವರ್ ಕುಮಾರ್ ಮತ್ತು ಮುಸ್ತಫಿಜುರ್ ರೆಹ್ಮಾನ್ ಡೆತ್ ಬೌಲಿಂಗ್ ಯೋಜನೆಯನ್ನು ಪರಿಪೂರ್ಣವಾಗಿಸಿ ತವರುತಂಡದಿಂದ ಗೆಲುವನ್ನು ಕಸಿದುಕೊಂಡರು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂತು. ಸಚಿನ್ ಬೇಬಿ ಬ್ಯಾಟಿಂಗ್ ಆಡುತ್ತಿದ್ದು ಕೊನೆಯ ಎರಡು ಎಸೆತಗಳಲ್ಲಿ 14 ರನ್ ಅಗತ್ಯವಿತ್ತು. 
 
ಭುವಿ ಯಾವುದೇ ತಪ್ಪು ಎಸಗದೇ ಪೂರ್ಣ ಔಟ್‌ಸೈಡ್ ಆಫ್ ಬೌಲ್ ಮಾಡಿದರು. ಎಡ ಗೈ ಆಟಗಾರ ಒಂದು ಸಿಂಗಲ್ ಹೊಡೆಯಲು ಮಾತ್ರ ಸಾಧ್ಯವಾಯಿತು. ರನ್ನರ್ ತುದಿ ತಲುಪುತ್ತಿದ್ದಂತೆ  ಸೋಲು ಖಚಿತವಾಗಿದ್ದರಿಂದ ಸಚಿನ್ ಬೇಬಿ ಕಣ್ಣಲ್ಲಿ ಬಳಬಳನೇ ನೀರು ಹರಿಯಿತು. ತನ್ನ ತಂಡದ ಸೋಲಿಗೆ ದುಃಖತಪ್ತರಾಗಿ ಕಣ್ಣೀರ ಧಾರೆ ಹರಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2016: ಶ್ರೇಷ್ಟ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳು