Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಮದುವೆ ಯಾವಾಗ ಗೊತ್ತಾ?

ರೋಹಿತ್ ಶರ್ಮಾ ಮದುವೆ ಯಾವಾಗ ಗೊತ್ತಾ?
ಮುಂಬೈ , ಶುಕ್ರವಾರ, 29 ಮೇ 2015 (15:00 IST)
ಐಪಿಎಲ್‍ ಯಶಸ್ಸಿನ ಬೆನ್ನಲ್ಲೇ ರೋಹಿತ್ ಶರ್ಮಾ ಸಿಹಿಸುದ್ದಿಯೊಂದನ್ನು ತೇಲಿ ಬಿಟ್ಟಿದ್ದಾರೆ. ರೋಹಿತ್ ಸದ್ಯದಲ್ಲೇ ತಮ್ಮ ಗೆಳತಿ ರಿತಿಕಾರ ಜತೆ ಹಸೆ ಮಣೆ ಏರಲಿದ್ದೇನೆ ಎಂದು ಹೇಳಿದ್ದಾರೆ. ಬಾಂಗ್ಲಾ ಪ್ರವಾಸದ ಬಳಿಕ ಅವರು ತಮ್ಮ ಆತ್ಮೀಯ ಗೆಳತಿಯ ಜತೆ ಹೊಸ ಬಾಳನ್ನು ಪ್ರಾರಂಭಿಸಲಿದ್ದಾರೆ.
ಟೀಂ ಇಂಡಿಯಾ  ಜೂನ್ 7ರಿಂದ ಬಾಂಗ್ಲಾದೇಶ ಪ್ರವಾಸ ಆರಂಭಿಸಲಿದೆ. ಬಾಂಗ್ಲಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನಾಡಲಿರುವ ತಂಡ, ಜೂನ್ ಕೊನೆಯ ವಾರದಲ್ಲಿ ಸ್ವದೇಶಕ್ಕೆ ವಾಪಸ್ಸಾಗಲಿದೆ. 
 
ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್‌ನ್ನು ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಮೊದಲ ನಾಲ್ಕು ಪಂದ್ಯಗಳಲ್ಲಿ ದಯನೀಯ ಸೋಲು ಕಂಡಿದ್ದ ರೋಹಿತ್ ಬಳಗದ ಅದೃಷ್ಟ ರಿತಿಕಾ ಆಗಮನದಿಂದ ಸಂಪೂರ್ಣವಾಗಿ ಬದಲಾಗಿತ್ತು. ಪಂದ್ಯಗಳನ್ನು ವೀಕ್ಷಿಸಲು ರಿತಿಕಾ ಮೈದಾನಕ್ಕೆ ಬಂದ ಬಳಿಕ ಎಲ್ಲ ಪಂದ್ಯಗಳನ್ನು ರೋಹಿತ್ ಬಳಗ ಗೆಲ್ಲುತ್ತಾ ಹೋಯಿತು. ರೋಹಿತ್ ಸಮರ್ಥ ನಾಯಕತ್ವದ ಹಿಂದಿನ ಪ್ರೇರಕ ಶಕ್ತಿ ರಿತಿಕಾರವರೇ ಆಗಿದ್ದರು. 
 
ಈಡನ್ ಗಾರ್ಡನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿ ವಿಶ್ವದಾಖಲೆ ಮಾಡಿರುವ ರೋಹಿತ್  ರಿತಿಕಾಳನ್ನು ಕಳೆದ 6 ವರ್ಷಗಳಿಂದ ಬಲ್ಲರು.
 
ವರದಿಗಳ ಪ್ರಕಾರ 28 ವರ್ಷದ ರೋಹಿತ್ ರಿತಿಕಾಳನ್ನು (28) ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಬೊರಿವಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪ್ರಥಮ ಬಾರಿ ಭೇಟಿಯಾಗಿದ್ದರು.
 
ನನ್ನ ಆಪ್ತ ಗೆಳತಿಯನ್ನೇ ಜೀವನ ಸಂಗಾತಿಯಾಗಿ ಪಡೆಯುವುದಕ್ಕಿಂತ ಭಾಗ್ಯ ಬೇರೆ ಇಲ್ಲ ಎಂದು ರೋಹಿತ್ ಈ ಹಿಂದೆ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. 

Share this Story:

Follow Webdunia kannada