ಧೋನಿಗೆ ಹ್ಯಾಂಡ್ ಶೇಕ್ ಮಾಡುವ ಕನಿಷ್ಠ ಸಭ್ಯತೆ ಆರ್‌ಸಿಬಿ ಆಟಗಾರರಿಗಿಲ್ಲ: ಚೆನ್ನೈ ಫ್ಯಾನ್ಸ್‌ ಗರಂ

Sampriya
ಭಾನುವಾರ, 19 ಮೇ 2024 (16:48 IST)
ಬೆಂಗಳೂರು: ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯಾಟದಲ್ಲಿ ಸೋಲು ಅನುಭವಿಸುವ ಮೂಲಕ ಐಪಿಎಲ್ 2024ರ ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಹೊರಬಿದ್ದಿದೆ.

ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗೆ ಪ್ರವೇಶ ಪಡೆಯಿತು. ಇನ್ನೂ ಚೆನ್ನೈ ವಿರುದ್ಧ ಗೆಲುವು ಸಾಧಿಸುತ್ತಿದ್ದ ಹಾಗೇ ಮೈದಾನದಲ್ಲಿ ಆರ್‌ಸಿಬಿ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಆಟಗಾರರು ಒಬ್ಬರನೊಬ್ಬರು ಶ್ಲಾಘಿಸುತ್ತಾ, ಸಂಭ್ರಮಾಚರಣೆಯಲ್ಲಿ ತೊಡಗಿದರು.

ಈ ಖುಷಿಯಲ್ಲಿ ಆರ್‌ಸಿಬಿ ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರಿಗೆ ಶೇಕ್ ಹ್ಯಾಂಡ್ ಮಾಡದೆ ಗೌರವ ಸೂಚಿಸಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಎಂಎಸ್ ಧೋನಿ ಅವರು ಆರ್‌ಸಿಬಿ ಆಟಗಾರರಿಗೆ ಶುಭಕೋರಲು ಕಾಯುತ್ತ ಕುಳಿತಿದ್ದರು ಅವರಿಗೆ ಗೌರವ ಸೂಚಿಸಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಇನ್ನೊಂದೆಡೆ  ಧೋನಿ ಅವರು ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಆರ್‌ಸಿಬಿ ಆಟಗಾರರಿಗೆ ಅಭಿನಂದಿಸಿಲ್ಲ ಎಂದು ಆರ್‌ಸಿಬಿ ಆಟಗಾರರು ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಪಂದ್ಯಾಟದಿಂಡ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹೃದಯವಿದ್ರಾವಕ ನಿರ್ಗಮನಕ್ಕೆ ಒಳಗಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರರೊಂದಿಗೆ ಹಸ್ತಲಾಘವ ಮಾಡದೆ ಎಂಎಸ್ ಧೋನಿ ಮೈದಾನದಿಂದ ಹೊರನಡೆಯುತ್ತಿರುವುದನ್ನು ತೋರಿಸುವ ವಿಡಿಯೋ ಶನಿವಾರ ತಡರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

‌ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಯೊಬ್ಬರು ಸೆರೆಹಿಡಿದಿರುವ ವೀಡಿಯೊವು ತೀವ್ರ ಪಂದ್ಯದ ನಂತರ ಎದುರಾಳಿ ಆಟಗಾರರೊಂದಿಗೆ ಪಂದ್ಯದ ನಂತರದ ಸಾಮಾನ್ಯ ಹ್ಯಾಂಡ್‌ಶೇಕ್‌ಗಳಲ್ಲಿ ತೊಡಗಿಸಿಕೊಳ್ಳದೆ ಹತಾಶೆಗೊಂಡ ಧೋನಿ ಮೈದಾನದಿಂದ ನಿರ್ಗಮಿಸುವುದನ್ನು ತೋರಿಸುತ್ತದೆ. ಆದಾಗ್ಯೂ, ಅವರು ಹೊರಹೋಗುತ್ತಿದ್ದಂತೆ ಆರ್‌ಸಿಬಿ ಸಹಾಯಕ ಸಿಬ್ಬಂದಿಯನ್ನು ಒಪ್ಪಿಕೊಳ್ಳಲು ಅವರು ಸಮಯ ತೆಗೆದುಕೊಂಡರು

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

IND vs SA 2nd Test: ಹರಿಣ ಪಡೆಯ ಬಾಲಂಗೋಚಿಗಳ ಆಟಕ್ಕೆ ಸುಸ್ತಾದ ಭಾರತದ ಬೌಲರ್‌ಗಳು

ಸ್ಮೃತಿ ಮಂಧಾನ ಮದುವೆ ದಿಡೀರ್ ಮುಂದೂಡಿಕೆ: ಕಾರಣ ಶಾಕಿಂಗ್

Australian Open: ದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಕಿರೀಟ ಗೆದ್ದ ಲಕ್ಷ್ಯ ಸೇನ್

ಮುಂದಿನ ಸುದ್ದಿ
Show comments