Select Your Language

Notifications

webdunia
webdunia
webdunia
webdunia

ಎಂಎಸ್ ಧೋನಿ ಜತೆಗಿನ ವಿವಾದಕ್ಕೆ ತೇಪೆ ಹಾಕಲು ಪ್ರಯತ್ನಿಸಿದ ರವಿಚಂದ್ರನ್ ಅಶ್ವಿನ್

ಎಂಎಸ್ ಧೋನಿ ಜತೆಗಿನ ವಿವಾದಕ್ಕೆ ತೇಪೆ ಹಾಕಲು ಪ್ರಯತ್ನಿಸಿದ ರವಿಚಂದ್ರನ್ ಅಶ್ವಿನ್
Chennai , ಸೋಮವಾರ, 26 ಡಿಸೆಂಬರ್ 2016 (07:42 IST)
ಚೆನ್ನೈ: ವರ್ಷದ ಕ್ರಿಕೆಟಿಗನಾಗಿ ಆಯ್ಕೆಯಾದ ಸಂದರ್ಭದ ರವಿಚಂದ್ರನ್ ಅಶ್ವಿನ್ ತಮ್ಮ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದವರ ಪಟ್ಟಿಯಲ್ಲಿ ಎಂಎಸ್ ಧೋನಿ ಹೆಸರು ಪ್ರಸ್ತಾಪವಾಗದೇ ಇದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.


ಈ ಹಿನ್ನಲೆಯಲ್ಲಿ ಇವರಿಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂಬ ಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಆದರೆ ರವಿಚಂದ್ರನ್ ಅಶ್ವಿನ್ ಈ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. 

ತಾವೇ ಸ್ವತಃ ಹೇಳಿಕೆ ನೀಡದಿದ್ದರೂ, ಅಭಿಮಾನಿಯೊಬ್ಬರ ಟ್ವೀಟ್ ನ್ನು ರಿಟ್ವೀಟ್ ಮಾಡಿ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ. ಅಭಿಮಾನಿಯ ಟ್ವಿಟ್ ನಲ್ಲಿ “ಈ ಧನ್ಯವಾದ ಸಲ್ಲಿಸಿದವರ ಪಟ್ಟಿಯನ್ನು ಸ್ವತಃ ಧೋನಿಯೇ ನೋಡಿರಲಿಕ್ಕಿಲ್ಲ. ಆದರೆ ಈ ಸಾಮಾಜಿಕ ಜಾಲತಾಣಗಳು ಸಹೋದರರನ್ನೂ ಶತ್ರುಗಳಾಗಿಸುತ್ತವೆ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ಅಶ್ವಿನ್ ರಿಟ್ವೀಟ್ ಮಾಡುವ ಮೂಲಕ ಪರೋಕ್ಷ ಸಂದೇಶ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿ ಜತೆ ವಿರಾಟ್ ಕೊಹ್ಲಿ ಕ್ರಿಸ್ ಮಸ್ ಪಾರ್ಟಿ