Select Your Language

Notifications

webdunia
webdunia
webdunia
webdunia

ಕೋಚ್ ಆಗಲು ಬಿಸಿಸಿಐಗೆ ಷರತ್ತು ವಿಧಿಸಿದ ರವಿ ಶಾಸ್ತ್ರಿ

ಕೋಚ್ ಆಗಲು ಬಿಸಿಸಿಐಗೆ ಷರತ್ತು ವಿಧಿಸಿದ ರವಿ ಶಾಸ್ತ್ರಿ
Mumbai , ಶುಕ್ರವಾರ, 23 ಜೂನ್ 2017 (08:45 IST)
ಮುಂಬೈ: ಅನಿಲ್ ಕುಂಬ್ಳೆಯಿಂದ ತೆರವಾದ ಟೀಂ ಇಂಡಿಯಾ ಕೋಚ್ ಹುದ್ದೆ ಆಯ್ಕೆ ಕಸರತ್ತು ನಡೆಯುತ್ತಿದ್ದು, ನಾಯಕ ವಿರಾಟ್ ಕೊಹ್ಲಿ ಮನಸು ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮೇಲಿದೆ.

 
ಗಂಗೂಲಿ, ಲಕ್ಷ್ಮಣ್ ಮತ್ತು ಸಚಿನ್ ರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಕೊಹ್ಲಿ ಬಳಿ ಈಗಾಗಲೇ ಕೋಚ್ ಹುದ್ದೆಗೆ ಅರ್ಜಿ ಹಾಕಿದವರಲ್ಲದೆ, ಇನ್ನೊಬ್ಬರ ಹೆಸರು ಸೂಚಿಸುವಂತೆ ಹೇಳಿದಾಗ ಕೊಹ್ಲಿ ಶಾಸ್ತ್ರಿ ಹೆಸರನ್ನು ಸೂಚಿಸಿದ್ದರಂತೆ.

ತಮ್ಮಿಬ್ಬರ ನಡುವಿನ ಸಾಮರಸ್ಯವನ್ನು ನೆನಪಿಸಿದ್ದ ಕೊಹ್ಲಿ ಅವರನ್ನೇ ಆಯ್ಕೆ ಮಾಡುವಂತೆ ಸಲಹಾ ಸಮಿತಿ ಎದುರು ಹೇಳಿದ್ದಾರಂತೆ. ಹೀಗಾಗಿ ಇದೀಗ ಬಿಸಿಸಿಐ ರವಿ ಶಾಸ್ತ್ರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.

ಆದರೆ ಅವರು ಅರ್ಜಿ ಸಲ್ಲಿಸಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಒಂದು ಷರತ್ತು ವಿಧಿಸಿದ್ದಾರೆಂದು ಬಿಸಿಸಿಐ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. ಯಾವುದೇ ಕಾರಣಕ್ಕೂ ತನ್ನನ್ನು ಆಯ್ಕೆ ಮಾಡುವವರ ಎದುರು ಸಂದರ್ಶನಕ್ಕೆ ನಿಲ್ಲಿಸಬಾರದು. ಒಂದು ವೇಳೆ ನನ್ನನ್ನು ಆಯ್ಕೆ ಮಾಡುವುದಿದ್ದರೆ, ಸಂದರ್ಶನವಿಲ್ಲದೇ ನೇರವಾಗಿ ಕೋಚ್ ಆಗಿ ನೇಮಕ ಮಾಡಬೇಕು ಎಂಬುದೇ ಆ ಷರತ್ತು.

ಕಳೆದ ವರ್ಷ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂದರ್ಶಿಸುವಾಗ ಸಲಹಾ ಸದಸ್ಯರಲ್ಲೊಬ್ಬರಾದ ಗಂಗೂಲಿ ಹಾಜರಿರಲಿಲ್ಲ. ತಮ್ಮನ್ನು ನಾಮಾವಸ್ಥೆ ಸಂದರ್ಶಿಸಲಾಗಿತ್ತು ಎಂದು ರವಿ ಶಾಸ್ತ್ರಿ ದೂರಿದ್ದರು. ಈ ಹಿನ್ನಲೆಯಲ್ಲಿ ಅವರು ಈ ಷರತ್ತು ವಿಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಕುಂಬ್ಳೆ ರಾಜೀನಾಮೆ ಬಗ್ಗೆ ಬಾಯ್ಬಿಟ್ಟ ವಿರಾಟ್ ಕೊಹ್ಲಿ