Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಶ್ರೇಷ್ಟ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿಗೆ ಸ್ಥಾನವೇ ಇಲ್ಲ

ರವಿಶಾಸ್ತ್ರಿ ಶ್ರೇಷ್ಟ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿಗೆ ಸ್ಥಾನವೇ ಇಲ್ಲ
Mumbai , ಸೋಮವಾರ, 9 ಜನವರಿ 2017 (12:15 IST)
ನವದೆಹಲಿ: ಸೌರವ್ ಗಂಗೂಲಿ ಮತ್ತು ರವಿ ಶಾಸ್ತ್ರಿ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತೀಯ ಕ್ರಿಕೆಟ್ ನ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ರವಿ ಶಾಸ್ತ್ರಿ ಸೌರವ್ ಗಂಗೂಲಿ ಹೆಸರೇ ಪ್ರಸ್ತಾಪಿಸದೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರದಲ್ಲಿ ಇವರಿಬ್ಬರ ಸಂಬಂಧ ಹಳಸಿತ್ತು. ಇದಾದ ಮೇಲೆ ಸಮಯ ಸಿಕ್ಕಾಗಲೆಲ್ಲಾ ಗಂಗೂಲಿಯನ್ನು ಜರೆಯುವುದನ್ನು ಬಿಡುವುದಿಲ್ಲ. ಧೋನಿ ನಾಯಕತ್ವ ತ್ಯಜಿಸಿದ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಾಗ ರವಿ ಶಾಸ್ತ್ರಿ ಗಂಗೂಲಿಯನ್ನು ಪರೋಕ್ಷವಾಗಿ ಕುಟುಕಿದ್ದಾರೆ.

ಧೋನಿ ದಾದಾ ನಾಯಕ ಎಂದು ಹೊಗಳಿದ ರವಿ ಶಾಸ್ತ್ರಿ ಭಾರತದ ಶ್ರೇಷ್ಟ ನಾಯಕರ ಪೈಕಿ, ಕಪಿಲ್ ದೇವ್, ಅಜಿತ್ ವಾಡೇಕರ್,  ಟೈಗರ್ ಪಟೌಡಿ ಹೆಸರು ಪ್ರಸ್ತಾಪಿಸಿದರೂ, ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತಿದ್ದ ಟೀ ಇಂಡಿಯಾವನ್ನು ಯಶಸ್ಸಿನತ್ತ ಕೊಂಡೊಯ್ದ ಗಂಗೂಲಿ ಹೆಸರು ಬರಲೇ ಇಲ್ಲ. ಈ ಮೂಲಕ ಮತ್ತೊಮ್ಮೆ ಗಂಗೂಲಿ-ಶಾಸ್ತ್ರಿ ಕೋಳಿ ಜಗಳ ಬಹಿರಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ ಬ್ಯಾಡ್ಮಿಂಟನ್ ಡಬಲ್ಸ್ ಗೆದ್ದರಂತೆ!