Select Your Language

Notifications

webdunia
webdunia
webdunia
webdunia

ಯಶಸ್ಸಿನ ಕ್ರೆಡಿಟ್ ತೆಗೆದುಕೊಳ್ಳದ ರಾಹುಲ್ ದ್ರಾವಿಡ್

ಯಶಸ್ಸಿನ ಕ್ರೆಡಿಟ್ ತೆಗೆದುಕೊಳ್ಳದ ರಾಹುಲ್ ದ್ರಾವಿಡ್
Bangalore , ಸೋಮವಾರ, 26 ಡಿಸೆಂಬರ್ 2016 (06:57 IST)
ಬೆಂಗಳೂರು: ರಾಹುಲ್ ದ್ರಾವಿಡ್ ಎಂದರೆ ಎಷ್ಟು ವಿನಮ್ರ ಎಂಬುದನ್ನು ಮತ್ತೊಮ್ಮೆ ಅವರು ನಿರೂಪಿಸಿದ್ದಾರೆ. ಇತ್ತೀಚೆಗೆ ತಾವು ಕೋಚ್ ಆಗಿರುವ ಎ ತಂಡದ ಸದಸ್ಯರು ಟೀಂ ಇಂಡಿಯಾದಲ್ಲಿ ಯಶಸ್ಸು ಕಾಣುತ್ತಿರುವುದಕ್ಕೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಲು ನಯವಾಗಿ ನಿರಾಕರಿಸಿದ್ದಾರೆ.


ಕರುಣ್ ನಾಯರ್, ಕೆಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಯಶಸ್ಸು ಕಾಣುತ್ತಿರುವ ಯುವ ಆಟಗಾರರು. ಇವರೆಲ್ಲಾ ಒಂದು ಕಾಲದಲ್ಲಿ ದ್ರಾವಿಡ್ ಗರಡಿಯಲ್ಲಿ ಪಳಗಿದವರೇ. ಕರುಣ್ ತ್ರಿಶತಕ ಗಳಿಸಿದಾಗ ಅದರ ಯಶಸ್ಸು ದ್ರಾವಿಡ್ ರ ಶ್ರಮದ ಪ್ರತಿಫಲ ಎಂದೇ ಎಲ್ಲರೂ ಹೊಗಳಿದ್ದರು. ಆದರೆ ದ್ರಾವಿಡ್ ಮಾತ್ರ ಇದನ್ನು ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಹೆಗಲಿಗೇರಿಸಿದ್ದಾರೆ.

ಎ ತಂಡದಿಂದ ಹೋದ ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಯಶಸ್ಸು ಕಾಣುತ್ತಿರುವುದಕ್ಕೆ ಅನಿಲ್ ಮತ್ತು ಕೊಹ್ಲಿ ಅವರನ್ನು ಸ್ವೀಕರಿಸುತ್ತಿರುವ ಪರಿ ಕಾರಣ. ಯುವ ಆಟಗಾರರನ್ನು ಅವರು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಅವರು ಯಶಸ್ಸು ಕಾಣುತ್ತಿದ್ದಾರೆ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.

ಆದರೆ ತಾವು ಕೋಚ್ ಆಗಿರುವ ಭಾರತ ಎ ತಂಡದಿಂದ ಅದ್ಭುತ ಆಟಗಾರರನ್ನು ಹೇಗೆ ಹೊರತರುತ್ತಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ. “ನಾವು ರಾಷ್ಟ್ರೀಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ರಾಷ್ಟ್ರೀಯ ತಂಡದ ಸದ್ಯದ ಅಗತ್ಯವೇನೆಂದು ನೋಡಿಕೊಂಡು ಇಲ್ಲಿ ಅಂತಹ ಆಟಗಾರರನ್ನು ತಯಾರುಗೊಳಿಸುತ್ತೇವೆ. ಅಲ್ಲಿಗೆ ಆಲ್ ರೌಂಡರ್ ಅಗತ್ಯವಿದ್ದರೆ, ಆಟಗಾರರನ್ನು ಆ ರೀತಿಯೇ ತಯಾರು ಮಾಡುತ್ತೇವೆ” ಎಂದು ಭಾರತೀಯ ಕ್ರಿಕೆಟ್ ನ ವಾಲ್ ಹೇಳಿಕೊಂಡಿದ್ದಾರೆ.

ಭಾರತ ಎ ತಂಡ ಎನ್ನುವುದು ಭರ್ಜರಿ ಜಯ ಗಳಿಸುತ್ತಾ ಸಾಗುವುದು ಮಾತ್ರವಲ್ಲ. ಹೊಸ, ಪ್ರತಿಭಾವಂತರನ್ನು ತಯಾರು ಮಾಡುವ ಗರಡಿ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಧೋನಿಯ ಸಂಬಂಧ ತಂದೆ-ಮಗುವಿನಂತೆ: ಮೊಹಮ್ಮದ್ ಶಮಿ