ಸ್ಟೀವ್ ವಾ ‘ಆ’ ರೀತಿ ಕೆಣಕಿದ್ದಕ್ಕೆ ರಾಹುಲ್ ದ್ರಾವಿಡ್ ಎಂದೂ ಮರೆಯದ ಉತ್ತರ ಕೊಟ್ಟಿದ್ದರು!

Webdunia
ಭಾನುವಾರ, 17 ಡಿಸೆಂಬರ್ 2017 (11:11 IST)
ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ 2001 ರ ಕೋಲ್ಕೊತ್ತಾ ಟೆಸ್ಟ್ ಪಂದ್ಯ ನೆನಪಾಗುವುದು. ಲಕ್ಷ್ಮಣ್ ಜತೆ ಸೇರಿಕೊಂಡು ಈ ಎರಡೂ ಜೋಡಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ರೀತಿಗೆ ಇಡೀ ವಿಶ್ವವೇ ಬೆರಗಾಗಿತ್ತು.
 

ಆದರೆ ಅಂತಹದ್ದೊಂದು ಇನಿಂಗ್ಸ್ ಕಟ್ಟಲು ನೆರವಾಗಿದ್ದು ಸ್ಟೀವ್ ವಾ ಸ್ಲೆಡ್ಜಿಂಗ್ ಎಂದು ರಾಹುಲ್ ದ್ರಾವಿಡ್ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಾವು ಮೈದಾನಕ್ಕಿಳಿದಾಗಲೇ ವಾ ತಮ್ಮನ್ನು ಕೆಣಕಿದ್ದಕ್ಕೇ ಛಲ ಹೊತ್ತು ಆಡಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಫಾಲೋ ಆನ್ ಗೆ ತುತ್ತಾಗಿದ್ದ ಭಾರತ ತಂಡವನ್ನು ಕೊನೆಗೆ ದ್ರಾವಿಡ್-ಲಕ್ಷ್ಮಣ್ ಜೋಡಿ ಐತಿಹಾಸಿಕ ಜಯದತ್ತ ಕೊಂಡೊಯ್ದಿದ್ದರು.

ಇದೇ ಕಾರಣಕ್ಕೆ ಇಂದಿಗೂ ಆಸಿಸ್ ತಂಡ ಭಾರತದ ಮೇಲೆ ಫಾಲೋ ಆನ್ ಹೇರಲು ಹಿಂದು ಮುಂದು ನೋಡುತ್ತದೆ. ಅಷ್ಟಕ್ಕೂ ಅವತ್ತು ಸ್ಟೀವ್ ಏನು ಹೇಳಿದ್ದರು?  ‘ಕೆಲವು ಪಂದ್ಯಗಳಿಂದ ನಾನು ಚೆನ್ನಾಗಿ ಆಡಿರಲಿಲ್ಲ. ಹೀಗಾಗಿ ನಂ.6 ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದೆ. ಆವತ್ತು ಭಾರತ ತಂಡ ಹೀನಾಯ ಸ್ಥಿತಿಯಲ್ಲಿತ್ತು. ಆಗ ನಾನು ಬ್ಯಾಟಿಂಗ್ ಗೆಂದು ಮೈದಾನಕ್ಕಿಳಿದಾಗ ಅಲ್ಲಿದ್ದ ಸ್ಟೀವ್ ನನ್ನ ಬಳಿ ಬಂದು ಈ ಪಂದ್ಯದಲ್ಲಿ ನಂ.6 ನೇ ಸ್ಥಾನ. ಮುಂದಿನ ಪಂದ್ಯದಲ್ಲಿ ಎಷ್ಟು? ನಂ. 12 ? ಎಂದು ಕೆಣಕಿದರು.

ಆಗಲೇ ನಾನು ನಿರ್ಧರಿಸಿದ್ದೆ ಚೆನ್ನಾಗಿ ಆಡಬೇಕೆಂದು. ಆವತ್ತು ನಾನು ಪ್ರತೀ ಬಾಲ್ ಗೆ ಒಂದು ಯೋಜನೆ ರೂಪಿಸಿ ಆಡಿದ್ದೆ. ಒಂದು ಬಾರಿ ಒಂದು ಬಾಲ್ ಎಂಬ ನಿಯಮದಂತೆ ಆಡಿದೆ. ಯಶಸ್ಸೂ ಕಂಡೆ’ ಎಂದು ದ್ರಾವಿಡ್ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments