ಮುಂಬೈ: ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಮೊದಲು ತಮಗೆ ಸಂಭಾವನೆ ನೀಡಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದ ನಂತರ ಸಭೆ ಸೇರಿದ್ದ ಈ ಸಲಹಾ ಸಮಿತಿ ಸದಸ್ಯ ಕ್ರಿಕೆಟಿಗರು, ಕೋಚ್ ಆಯ್ಕೆ ಮಾಡುವ ಕೆಲಸಕ್ಕೆ ತಮಗೆ ಗೌರವ ಧನ ಕೊಡಬೇಕು ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಬಳಿ ಒತ್ತಾಯಿಸಿದ್ದಾರೆ.
ಇದೀಗ ರಾಹುಲ್ ಜೋಹ್ರಿ ಈ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಮಂಡಳಿಯ ಮುಂದಿಡಲಿದ್ದಾರೆ. ಇದು ಬಿಸಿಸಿಐನ ಉಪ ಸಮಿತಿ. ಅಲ್ಲದೆ, ಇವರ ಸದಸ್ಯರು ಬಿಸಿಸಿಐಯಲ್ಲಿ ಬೇರೆ ಹುದ್ದೆಯಲ್ಲಿದ್ದು, ಅದಕ್ಕೆ ವೇತನ ಪಡೆಯುತ್ತಿದ್ದಾರೆ. ಹಾಗಾಗಿ ಕೋಚ್ ಆಯ್ಕೆ ಕೆಲಸಕ್ಕೆ ಪ್ರತ್ಯೇಕವಾಗಿ ವೇತನ ನೀಡುವ ಅಗತ್ಯವಿಲ್ಲ ಎಂದು ಬಿಸಿಸಿಐನಲ್ಲಿ ಕೆಲವರ ಅಭಿಪ್ರಾಯವಾಗಿದೆ. ಒಟ್ಟಾರೆ ಬಿಸಿಸಿಐ ಇದೀಗ ಎಲ್ಲವೂ ಗೊಂದಲಮಯವಾಗಿದೆ.