Webdunia - Bharat's app for daily news and videos

Install App

ಪಾಕ್ ಪೇಚಾಟ - ಟೆಸ್ಟ್‌ನಲ್ಲಿ 'ಟಾಪ್', ಏಕದಿನದಲ್ಲಿ 'ಫ್ಲಾಪ್'

Webdunia
ಶುಕ್ರವಾರ, 9 ಸೆಪ್ಟಂಬರ್ 2016 (15:44 IST)
ಪಾಕಿಸ್ತಾನಕ್ಕೆ ಅದೆಂತಹ ಪೇಚಾಟ ನೋಡಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಅದು ಟಾಪ್‌ನಲ್ಲಿದ್ದರೆ, ಸೀಮಿತ ಓವರ್‌ಗಳ ಕ್ರಿಕೆಟ್ ರೂಪದಲ್ಲಿ ರೂಪದಲ್ಲಿ ಎಲ್ಲ ತಂಡಗಳಿಗಿಂತ ಕನಿಷ್ಠ ಸ್ಥಾನದಲ್ಲಿದೆ. ಪಾಕಿಸ್ತಾನದ ಈ ಸಂದಿಗ್ಧತೆ ಕ್ರಿಕೆಟ್‌ನ ವಿವಿಧ ಸ್ವರೂಪಗಳಲ್ಲಿ ಯಶಸ್ವಿಯಾಗಲು ಬೇಕಾದ ನೈಪುಣ್ಯತೆಯಲ್ಲಿ ಬೆಳೆಯುತ್ತಿರುವ ವ್ಯತ್ಯಾಸಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ
ಪಾಕಿಸ್ತಾನ ದೀರ್ಘಾವಧಿಯ ಕ್ರಿಕೆಟ್ ರೂಪದಲ್ಲಿ, ಶ್ವೇತ ವಸ್ತ್ರದ ಆಟದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಬಣ್ಣದ ಉಡುಗೆಯ ಆಟದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ. ಟಿ20 ಶ್ರೇಯಾಂಕದಲ್ಲಿ ಸಹ ಅವರು 7ನೇ ಸ್ಥಾನಕ್ಕೆ ಕುಸಿದಿದ್ದಾರೆ. 
 
ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2- ಮೂಲಕ ಡ್ರಾ ಮಾಡಿಕೊಂಡ ಪಾಕ್, ಟೆಸ್ಟ್ ವಿಭಾಗದಲ್ಲಿ ಮೊದಲ ಸ್ಥಾನಕ್ಕೇರಿತು. ಆದರೆ ಅದೇ ಇಂಗ್ಲೆಂಡ್ ತಂಡದ ವಿರುದ್ಧ 4-1 ರಿಂದ ದಯನೀಯ ಸೋಲು ಕಂಡು ಏಕದಿನ ಕ್ರಿಕೆಟ್ ರೂಪದಲ್ಲಿ 9ನೇ ಸ್ಥಾನಕ್ಕೆ ಜಾರಿದೆ. 
 
ಪಾಕಿಸ್ತಾನ ಪ್ರಸಿದ್ದ ವೇಗದ ಬೌಲರ್ ವಾಸಿಮ್ ಅಕ್ರಮ್ ಈ ವೈರುಧ್ಯ "ಅನಿವಾರ್ಯ" ಎಂದಿದ್ದಾರೆ. ಸೀಮಿತ ಎಸೆತಗಳ ಕ್ರಿಕೆಟ್‌ನಲ್ಲಿ ತರಬೇಕಾದ ಬದಲಾವಣೆಗಳಲ್ಲಿ ನಾವು ವೇಗವನ್ನು ಕಂಡುಕೊಳ್ಳಲಿಲ್ಲ. ಆದರೆ ಇತರ ತಂಡಗಳು ಈ ದಿಶೆಯಲ್ಲಿ ರಭಸದಿಂದ ಪ್ರಗತಿಯನ್ನು ತಂದುಕೊಂಡವು. ಇಂಗ್ಲೆಂಡ್‌ನ್ನು ನೋಡಿ, 2015ರ ವಿಶ್ವ ಕಪ್ ಬಳಿಕ ಅವರು ತಂದುಕೊಂಡ ಬದಲಾವಣೆ ಗಮನಾರ್ಹ, ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 
 
ಗಮನಾರ್ಹ ಸಂಗತಿ ಎಂದರೆ ಕಳೆದ ಬಾರಿಯ ವಿಶ್ವ ಕಪ್‌ನಲ್ಲಿಯೇ ಆರಂಭಿಕ ಹಂತದಲ್ಲಿಯೇ ಹೊರಕ್ಕೆ ಬಿದ್ದಿದ್ದ ಇಂಗ್ಲೆಂಡ್, ಇಂದು ಏಕದಿನ ಕ್ರಿಕೆಟ್‌ನ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಿದೆ. ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ವಿಶ್ವದಾಖಲೆಯ 444 ರನ್ ಪೇರಿಸಿದ್ದು ಇದಕ್ಕೆ ಬಹುದೊಡ್ಡ ಸಾಕ್ಷಿ. 
 
ಈ ವಾರದ ಆರಂಭದಲ್ಲಿ ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 1-4ರಲ್ಲಿ ಸೋತಿರುವ ಪಾಕಿಸ್ತಾನ, ಶ್ರೇಯಾಂಕದಿತಿಹಾಸದಲ್ಲಿ ಮೊದಲ ಬಾರಿಗೆ ಕನಿಷ್ಠ ಅಂಕಗಳನ್ನು ಗಳಿಸಿ ಕೊನೆಯ ಸ್ಥಾನಕ್ಕೆ ಜಾರಿದೆ. ನೆರೆ ದೇಶದ ಈ ಅಧಃ ಪತನ 2019ರಲ್ಲಿ ನಡೆಯಲಿರುವ ವಿಶ್ವ ಕಪ್‌ಗೆ ಪಾಕಿಸ್ತಾನದ ನೇರ ಪ್ರವೇಶದ ಹಾದಿಯನ್ನು ದುರ್ಗಮಗೊಳಿಸಿದೆ.
 
ಇಂಗ್ಲೆಂಡ್ ವಿರುದ್ಧದ ಐದನೆಯ ಮತ್ತು ಕೊನೆಯ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಜಯಿಸಿದರೂ ಪಾಕಿಸ್ತಾನ ಗಂಭೀರ ಅಪಾಯದಲ್ಲಿ ಸಿಲುಕಿದೆ. 8 ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ಗಿಂತ ಪಾಕ್ 8 ಅಂಕ ಕೆಳಗಿದೆ. 
 
87 ಅಂಕಗಳಿಂದ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಆರಂಭಿಸಿದ್ದ ಪಾಕಿಸ್ತಾನ ಹೀನಾಯ ಸೋಲಿನಿಂದಾಗಿ 1 ಅಂಕ ಕಳೆದುಕೊಂಡು 86ಕ್ಕೆ ಕುಸಿದಿದೆ.  ಶ್ರೇಯಾಂಕ ಪದ್ಧತಿ ಪರಿಚಯವಾದಾಗಿನಿಂದ (2001)  ಇಲ್ಲಿಯವರೆಗೆ ಪಾಕ್ ಎಂದಿಗೂ ಸಹ ಈ ದಯನೀಯ ಸ್ಥಿತಿಗೆ ಇಳಿದಿರಲಿಲ್ಲ. 
 
2019ರಲ್ಲಿ ನಡೆಯಲಿರುವ ವಿಶ್ವ ಕಪ್‌ಗೆ ನೇರ ಪ್ರವೇಶ ಗಿಟ್ಟಿಸಬೇಕೆಂದರೆ ಪಾಕ್ ಮುಂಬರುವ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಏಕದಿನ ಸರಣಿಗಳಲ್ಲಿ ತಮ್ಮ ಅಂಕವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಪಾಕ್‌ಗೆ ಅರ್ಹತಾ ಸುತ್ತು ಆಡುವುದು ಅನಿವಾರ್ಯ. 
 
30 ಸೆಪ್ಟೆಂಬರ್ 2017ರೊಳಗೆ ಟಾಪ್ 8 ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments