Webdunia - Bharat's app for daily news and videos

Install App

ಓ ಮೈ ಗಾಡ್! ವೀರೇಂದ್ರ ಸೆಹ್ವಾಗ್ ಹೀಗೂ ಮಾಡಲು ಸಾಧ್ಯವೇ

Webdunia
ಗುರುವಾರ, 8 ಡಿಸೆಂಬರ್ 2016 (11:08 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ಎಂದರೆ ಮನೋರಂಜನೆ. ಅವರಿದ್ದಲ್ಲಿ ಸದಾ ಲವಲವಿಕೆಯಿಂದಿರುವಂತೆ ನೋಡಿಕೊಳ್ಳುತ್ತಾರೆ. ಆದರೆ ಅವರು ಕ್ರಿಕೆಟ್ ಮೈದಾನದಲ್ಲಿದ್ದಾಗ ಒಮ್ಮೆ ಸಚಿನ್ ತೆಂಡುಲ್ಕರ್ ಜತೆ ಮಾಡಿಕೊಂಡ ಎಡವಟ್ಟು ನೋಡಿದರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.

ಸೆಹ್ವಾಗ್ ತುಂಬಾ ವಾಚಾಳಿಯಂತೆ. ಒಂದು ನಿಮಿಷವೂ ಸುಮ್ಮನೆ ಕೂರುತ್ತಿರಲಿಲ್ಲವಂತೆ. ಇದು ಅವರ ಸಾಥಿ ಸಚಿನ್ ತೆಂಡುಲ್ಕರ್ ಗೆ ಕಿರಿ ಕಿರಿಯುಂಟು ಮಾಡುತ್ತಿತ್ತಂತೆ. ಅದಕ್ಕೆ ಸಚಿನ್ ಒಮ್ಮೆ ಅವರ ಬಾಯಿಗೆ ಬಾಳೆ ಹಣ್ಣು ತುರುಕಿದರಂತೆ. ಮಾರಾಯ, ಅಷ್ಟೊತ್ತಾದರೂ ಸುಮ್ಮನಿರಲಿ ಅಂತ.

ಒಂದೇ ಟೀಂ ನಲ್ಲಿರುವ ಬ್ಯಾಟ್ಸ್ ಮನ್ ಗಳು ಜತೆಯಾಗಿ ಆಡುವಾಗ ಎಡವಟ್ಟು ಮಾಡಿ ರನೌಟ್ ಮಾಡಬಹುದು. ಆದರೆ ಇನ್ನೊಂದು ತುದಿಯಲ್ಲಿರುವ ಆಟಗಾರನನ್ನು ಸ್ಟಂಪ್ ಔಟ್ ಮಾಡಲು ಸಾಧ್ಯವೇ? ವೀರೂ ಸಚಿನ್ ರನ್ನು ಈ ರೀತಿಯಾಗಿಯೂ ಔಟ್ ಮಾಡಿದ್ದರಂತೆ!

ಅದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ. ಸೆಹ್ವಾಗ್ ಅದಾಗಲೇ ಕ್ರೀಸ್ ಗೆ ಅಂಟಿಕೊಂಡು ಲೀಲಾಜಾಲವಾಗಿ ಸ್ಪಿನ್ನರ್ ಗಳ ವಿರುದ್ಧ ಆಡುತ್ತಿದ್ದರು. ಆದರೆ ಆಗಷ್ಟೇ ಕ್ರೀಸ್ ಗೆ ಬಂದಿದ್ದ ಸಚಿನ್ ಯಾಕೋ ಬಾಲ್ ಸ್ಪಿನ್ ಆಗುತ್ತಿದೆ ಎಂದು ಮುಂದೆ ಬಂದು ಹೊಡೆಯುವ ಸಾಹಸ ಮಾಡುತ್ತಿರಲಿಲ್ಲವಂತೆ. ಆದರೆ ಸೆಹ್ವಾಗ್ ಬಾಲ್ ಸ್ಪಿನ್ ಆಗುತ್ತಿಲ್ಲ. ಆರಾಮವಾಗಿ ಮುಂದೆ ಬಂದು ಹೊಡೆಯಿರಿ ಎಂದು ಸಚಿನ್ ಗೆ ಸಲಹೆ ಕೊಟ್ಟರಂತೆ.

ಆದರೆ ಸಚಿನ್ ಒಪ್ಪಲಿಲ್ಲ. ಕೊನೆಗೆ ಎರಡು-ಮೂರು ಆದ ಮೇಲೆ ಸೆಹ್ವಾಗ್ ಕಾಟ ತಡೆಯಲಾಗದೆ ಆಶ್ಲೇ ಜೈಲ್ಸ್ ಅವರ ಒಂದು ಎಸೆತ ಎದುರಿಸಲು ಮುನ್ನುಗ್ಗಿದರಂತೆ. ಅಷ್ಟೇ. ಸಚಿನ್ ಸ್ಟಂಪ್ ಔಟ್. ಸೆಹ್ವಾಗ್ ಗೆ ತಲೆ ಎತ್ತಲಾಗಲಿಲ್ಲ. ಆ ದಿನ ಚಹಾ ವಿರಾಮದ ವೇಳೆಗೂ ಪೆವಿಲಿಯನ್ ಗೆ ಹೋಗದೆ ಅಂಪಾಯರ್ ಗಳ ರೂಂನಲ್ಲಿ ಕುಳಿತು ಚಹಾ ಸೇವಿಸಿದರಂತೆ. ಇಲ್ಲಾಂದ್ರೆ ಸಚಿನ್ ಬೈಯೋದು ಗ್ಯಾರಂಟಿ ಎನ್ನುವುದು ಗೊತ್ತಿತ್ತು.

ಕೊನೆಗೂ ಸಚಿನ್ ಅವರನ್ನು ಪೆವಿಲಿಯನ್ ಗೆ ಕರೆಸಿಕೊಂಡು, ನೋಡಪ್ಪಾ ಇದುವರೆಗೆ ನಾನು ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಟಂಪ್ ಔಟ್ ಆಗಿರಲಿಲ್ಲ. ನೀನು ಅದನ್ನೂ ಮಾಡಿಬಿಟ್ಟೆ ಎಂದು ಕಿವಿ ಹಿಂಡಿದರಂತೆ. ಅಂತಾ ತರ್ಲೆ ಸೆಹ್ವಾಗ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments