Webdunia - Bharat's app for daily news and videos

Install App

ನ್ಯೂಜಿಲೆಂಡ್ ಟೆಸ್ಟ್ ತಂಡದಲ್ಲಿ ಭಾರತೀಯ ಸಂಜಾತ ಜೀತ್ ರಾವಲ್

Webdunia
ಶುಕ್ರವಾರ, 10 ಜೂನ್ 2016 (10:57 IST)
ನ್ಯೂಜಿಲೆಂಡ್ ತಂಡವು ಭಾರತೀಯ ಸಂಜಾತ ಓಪನಿಂಗ್ ಬ್ಯಾಟ್ಸ್‌ಮನ್ ಜೀತ್ ರಾವಲ್ ಅವರನ್ನು ಮುಂಬರುವ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ನಾಲ್ಕು ಟೆಸ್ಟ್ ಪ್ರವಾಸಕ್ಕೆ ಆಯ್ಕೆ ಮಾಡಿದೆ. 16 ಆಟಗಾರರ ಬ್ಲಾಕ್ ಕ್ಯಾಪ್ ತಂಡದಲ್ಲಿ ರಾವಲ್ ಮಾತ್ರ ಟೆಸ್ಟ್ ಆಡಿರದ ಆಟಗಾರರಾಗಿದ್ದಾರೆ.

ಈ ತಂಡದಲ್ಲಿ ಭಾರತೀಯ ಸಂಜಾತ ಸ್ಪಿನ್ನರ್ ಈಶ್ ಸೋಧಿ ಕೂಡ 2 ವರ್ಷಗಳ ಅನುಪಸ್ಥಿತಿಯ ಬಳಿಕ ಸೇರ್ಪಡೆಯಾಗಿದ್ದಾರೆ. ನ್ಯೂಜಿಲೆಂಡ್‌ಗೆ ತಮ್ಮ ಕುಟುಂಬದ ಜತೆ ಆಗಮಿಸುವ ಮುಂಚೆ 27 ವರ್ಷದ ರಾವಲ್ ಭಾರತದ ಕಿರಿಯ ಆಟಗಾರರಾಗಿದ್ದರು.
 
 ಅವರು ಮೊದಲ ದರ್ಜೆ ಕ್ರಿಕೆಟ್‌ನಲ್ಲಿ 43.48 ಸರಾಸರಿ ಸ್ಕೋರ್ ಮಾಡಿದ್ದು ಸ್ಥಳೀಯ ಸ್ಪರ್ಧೆಯಲ್ಲಿ ಆಕ್ಲೆಂಡ್ ಏಸಸ್ ಪರ ಉತ್ತಮ ಫಾರಂನಲ್ಲಿದ್ದರು. ಅವರ ಸ್ಕೋರಿನಲ್ಲಿ ಒಟಾಗೊ ವಿರುದ್ಧ 202 ರನ್ ಕೂಡ ಸೇರಿತ್ತು.
 
ರಾವಲ್ ಮಾರ್ಟಿನ್ ಗುಪ್ಟಿಲ್ ಮತ್ತು ಟಾಮ್ ಲಾಥಮ್ ಜತೆ ಆರಂಭಿಕ ಸ್ಪಾಟ್‌ಗೆ ಸ್ಪರ್ಧೆಯಲ್ಲಿದ್ದಾರೆ. ಗುಪ್ಟಿಲ್ ಮತ್ತು ಲಾಥಮ್ ಇಬ್ಬರೂ ಟೆಸ್ಟ್ ರಂಗದಲ್ಲಿ ಹೊಸ ಚೆಂಡಿನೊಂದಿಗೆ ಭರವಸೆಯ ಆಟಗಾರರಂತೆ ಕಾಣುತ್ತಿಲ್ಲ. ನ್ಯೂಜಿಲೆಂಡ್ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಜು. 29 ಮತ್ತು ಆಗಸ್ಟ್ 4ರಂದು ಕ್ರಮವಾಗಿ ನಡೆಯಲಿದೆ.
 ಬಳಿಕ ಅವರು ದಕ್ಷಿಣ ಆಫ್ರಿಕಾದ ಡರ್ಬನ್ ಮತ್ತು ಸೆಂಚುರಿಯನ್‌ಯಲ್ಲಿ ಟೆಸ್ಟ್ ಆಡಲು ತೆರಳಲಿದ್ದು, ಅದು ಆಗಸ್ಟ್ 19 ಮತ್ತು 27ರಂದು ಆರಂಭವಾಗಲಿದೆ.
 
 ನ್ಯೂಜಿಲೆಂಡ್ ತಂಡ: ಟ್ರೆಂಟ್ ಬೌಲ್ಟ್, ಡೌಗ್ ಬ್ರೇಸ್‌ವೆಲ್, ಮಾರ್ಕ್ ಕ್ರೈಗ್, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಹೆನ್ರಿ ನಿಕೋಲ್ಸ್, ಲ್ಯೂಕ್ ರಾಂಚಿ, ಜೀತ್ ರಾವಲ್, ಮಿಚೆಲ್ ಸಾಂಟ್ನರ್, ಈಶ್ ಸೋಧಿ, ಟಿಮ್ ಸೌಥೀ, ರೋಸ್ ಟೇಲರ್, ನೀಲ್ ವಾಗ್ನರ್, ವಾಟ್ಲಿಂಗ್, ಕೇನ್ ವಿಲಿಯಂಸನ್ (ನಾಯಕ).

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ

ಮುಂದಿನ ಸುದ್ದಿ
Show comments