ನವದೆಹಲಿ: ಭಾರತೀಯ ಶ್ರೇಷ್ಠ ನಾಯಕರಾರು ಎಂಬ ಕಿತ್ತಾಟ ಈಗ ನೆರೆಯ ಶ್ರೀಲಂಕಾ ಆಟಗಾರರವರೆಗೆ ತಲುಪಿದೆ. ರವಿ ಶಾಸ್ತ್ರಿ ಲಿಸ್ಟ್ ಹೇಳಿದ್ದಾಯ್ತು. ಇದೀಗ ಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಪ್ರಕಾರ ಸೌರವ್ ಗಂಗೂಲಿ ಭಾರತದ ಅತ್ಯಂತ ಶ್ರೇಷ್ಠ ನಾಯಕರಲ್ಲೊಬ್ಬರಂತೆ.
ಮೊನ್ನೆಯಷ್ಟೆ ರವಿ ಶಾಸ್ತ್ರಿ ಭಾರತೀಯ ಯಶಸ್ವಿ ನಾಯಕರ ಪೈಕಿ ಎಲ್ಲರ ಹೆಸರು ಹೇಳಿ ಬೇಕೆಂದೇ ಸೌರವ್ ಗಂಗೂಲಿ ಹೆಸರು ಕೈ ಬಿಟ್ಟಿದ್ದರು. ಗಂಗೂಲಿಗೂ ರವಿ ಶಾಸ್ತ್ರಿಗೂ ಕೋಚ್ ಆಯ್ಕೆ ವಿಚಾರದಲ್ಲಿ ವೈಮನಸ್ಯವಾದ ಮೇಲೆ ಬೇಕೆಂದೇ ಶಾಸ್ತ್ರಿ ಗಂಗೂಲಿಗೆ ಟಾಂಗ್ ಕೊಡುತ್ತಲೇ ಇದ್ದಾರೆ.
ಇದೀಗ ಗಂಗೂಲಿ ಹೇಳಿಕೆಗೆ ವ್ಯತಿರಿಕ್ತವಾಗಿ ಲಂಕಾ ಸ್ಪಿನ್ನರ್ ಗಂಗೂಲಿಯೇ ಶ್ರೇಷ್ಠ ನಾಯಕ. ಅವರು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದೇ ಮಾಡಿದ್ದಾರೆ ಎಂದಿದ್ದಾರೆ. ಬಹುಶಃ ರವಿ ಶಾಸ್ತ್ರಿ ಗಂಗೂಲಿ ಹೆಸರನ್ನು ತಪ್ಪಿ ಮರೆತಿರಬಹುದು ಎಂದು ಲಂಕಾ ಸ್ಪಿನ್ನರ್ ಹೇಳಿಕೊಂಡಿದ್ದಾರೆ.
ಅಲ್ಲಿಗೆ ಮಾಜಿ ನಾಯಕರಿಗಾಗಿ ಮಾಜಿಗಳ ಗುಂಪು ಚರ್ಚೆ ಶುರು ಮಾಡಿಕೊಂಡಂತಾಯಿತು. ಆದರೆ ನಮ್ಮವರದ್ದೇ ಸಾಧನೆಯನ್ನು ಮೆಚ್ಚಿಕೊಳ್ಳುವ ಒಳ್ಳೆತನ ನಮ್ಮವರಿಗೇ ಇಲ್ಲ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ