Select Your Language

Notifications

webdunia
webdunia
webdunia
webdunia

ನಾಯಕತ್ವ ತ್ಯಜಿಸಲು ಸಿದ್ಧ ಎಂದ ಧೋನಿ

ನಾಯಕತ್ವ ತ್ಯಜಿಸಲು ಸಿದ್ಧ ಎಂದ ಧೋನಿ
ಮಿರ್‍ಪುರ್ , ಸೋಮವಾರ, 22 ಜೂನ್ 2015 (11:33 IST)
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು ಸೋತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ಧೋನಿ, "ತಾವು ನಾಯಕತ್ವ ತ್ಯಜಿಸುವುದು ತಂಡಕ್ಕೆ ಲಾಭಕರ ಎಂದಾದರೆ ತಾವದಕ್ಕೆ ಸಿದ್ಧ", ಎಂದು ಹೇಳಿದ್ದಾರೆ.

ಕಳೆದ ಭಾನುವಾರ ಬಾಂಗ್ಲಾ ವಿರುದ್ಧ ಸತತ ಎರಡನೇ ಸೋಲನ್ನು ಕಾಣುವ ಮೂಲಕ ಭಾರತ ಬಾಂಗ್ಲಾದ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯನ್ನು ಸೋತಿದೆ. 
 
ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಧೋನಿ, " ನಾನು ನಾಯಕತ್ವ ತ್ಯಜಿಸಲು ಸಿದ್ದನಾಗಿದ್ದು, ಸಾಮಾನ್ಯ ಆಟಗಾರನಂತೆ ಟೀಂ ಇಂಡಿಯಾದಲ್ಲಿ ಆಡುತ್ತೇನೆ", ಎಂದು ಹೇಳಿದ್ದಾರೆ.
 
ಅಷ್ಟೊಂದು ಪ್ರಬಲ ತಂಡವಲ್ಲದ ಬಾಂಗ್ಲಾ ವಿರುದ್ಧದ ಕಳಪೆ ಪ್ರದರ್ಶಕ್ಕೆ ಮಾಧ್ಯಮಗಳು ಮತ್ತು ಇತರರಿಂದ ತೀವೃ ಟೀಕೆಗೊಳಗಾಗುತ್ತಿರುವುದರಿಂದ ನೊಂದಿರುವ ಧೋನಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. "ಭಾರತೀಯ ಕ್ರಿಕೆಟ್‌ನಲ್ಲಿ ಏನಾದರೂ ಕೆಟ್ಟದಾದರೆ ಯಾವಾಗಲೂ ನನ್ನ ಕಡೆಗೆ ಬೆರಳು ಮಾಡಲಾಗುತ್ತದೆ. ಕೆಟ್ಟದೆಲ್ಲಕ್ಕೆ ಕಾರಣ ನಾನೇ. ಬಾಂಗ್ಲಾದೇಶದ ಮಾಧ್ಯಮಗಳು ಸಹ ಕುಹಕವಾಡುತ್ತಿವೆ", ಎಂದು ಕೂಲ್ ಕ್ಯಾಪ್ಟನ್ ಬೇಸರದಿಂದ ನುಡಿದಿದ್ದಾರೆ. 
 
"ನಾನು ಕ್ರಿಕೆಟ್‍ನನ್ನು ಆನಂದಿಸುತ್ತೇನೆ. ನಾಯಕತ್ವಕ್ಕಾಗಿ ನಾನು ತಂಡವನ್ನು ಸೇರಿಲ್ಲ, ಇದು ನನಗೆ ನೀಡಿದ ಜವಾಬ್ದಾರಿಯಷ್ಟೇ. ನನಗೆ ಈ ಹೊಣೆಗಾರಿಕೆಯನ್ನು ವಹಿಸದವರು ಮರಳಿ ಪಡೆಯಬಹುದು. ನಾನದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ. ಈ ಜವಾಬ್ದಾರಿಗಿಂತ ನನಗೆ ತಂಡ ಮುಖ್ಯ. ಪ್ರತಿ ಪಂದ್ಯದಲ್ಲಿ ಭಾರತ ತಂಡ ಗೆಲ್ಲಬೇಕೆಂದು ನಾನು ಕನಸು ಕಾಣುತ್ತೇನೆ. ಯಾರು ನಾಯಕರಾದರೂ ನನಗೆ ಬೇಸರವಿಲ್ಲ", ಎಂದಿದ್ದಾರೆ ಧೋನಿ. 
 
ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರ ಬೆಂಬಲದಿಂದಾಗಿ ಕಳಪೆ ಪ್ರದರ್ಶದ ನಡುವೆಯೂ ಧೋನಿ ನಾಯಕರಾಗಿ ಮುಂದುವರೆದಿದ್ದಾರೆ ಎಂದು ಪಶ್ಚಿಮ ಬಂಗಾಲದ ಕ್ರಿಕೆಟ್ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಕೆಲ ದಿನಗಳ ಆರೋಪ ಮಾಡಿದ್ದರು.

Share this Story:

Follow Webdunia kannada