Select Your Language

Notifications

webdunia
webdunia
webdunia
webdunia

ಪ್ರಥಮ ಬಾರಿಗೆ ಅಪ್ಪನ ಡ್ರೆಸ್ಸಿಂಗ್ ರೂಮ್‌ಗೆ ಬಂದ ಧೋನಿ ಮಗಳು

ಪ್ರಥಮ ಬಾರಿಗೆ ಅಪ್ಪನ ಡ್ರೆಸ್ಸಿಂಗ್ ರೂಮ್‌ಗೆ ಬಂದ ಧೋನಿ ಮಗಳು
ಬೆಂಗಳೂರು , ಗುರುವಾರ, 23 ಏಪ್ರಿಲ್ 2015 (11:15 IST)
ಮಗಳು ಹುಟ್ಟಿ ಎರಡು ತಿಂಗಳಾದರೂ ಆಕೆಯ ಮುಖ ನೋಡದಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಈಗ ಮಗಳನ್ನು ಅಗಲಿ ಇರುತ್ತಿಲ್ಲ. ತಾನು ಹೋದಲೆಲ್ಲ ಧೋನಿ ಮಗಳನ್ನು ಎದೆಗೊತ್ತಿಕೊಂಡು ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿವೆ. 

ಕಳೆದ ತಿಂಗಳು ಧೋನಿ ಪುಟ್ಟ ಮಗುವೊಂದರ ಜತೆಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿತ್ತು. ನಂತರ ಅದು ತಮ್ಮ ಮಗು ಅಲ್ಲವೆಂದು ಸ್ವತಃ ಧೋನಿ ಪತ್ನಿ ಸಾಕ್ಷಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದರು. 
 
ಐಪಿಎಲ್ ಪಂದ್ಯದ ಸಲುವಾಗಿ ರಾಷ್ಟ್ರದ ವಿವಿಧ ಭಾಗಗಳಿಗೆ ಪ್ರವಾಸ ಮಾಡುತ್ತಿರುವ ಧೋನಿ ಜೊತೆಗೆ ಪತ್ನಿ ಹಾಗೂ ಮಗಳನ್ನು ಕರೆದೊಯ್ಯುತ್ತಿದ್ದು ಪ್ರತಿ ಕಡೆಯಲ್ಲೂ ಧೋನಿ ಪುತ್ರಿ ಝೀವಾಳ ಚಿತ್ರವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿಯಲು ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ.
 
ಕಳೆದೆರಡು ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿಯವರ ಪತ್ನಿ ಸಾಕ್ಷಿ ಧೋನಿ ತಮ್ಮ ಪುತ್ರಿಯ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು  ಅದು ಎಲ್ಲರ ಗಮನ ಸೆಳೆಯುತ್ತಿದೆ.
 
ಈಗ ಸ್ವತಃ ಧೋನಿಯವರೇ ತಮ್ಮ ಮಗಳು ಪ್ರಥಮ ಬಾರಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. 
 
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 27 ರನ್‌ಗಳಿಂದ ಸೋಲಿಸಿದ ನಂತರ ಧೋನಿ ಸಹ  ತಮ್ಮ ಮಗಳು ಝೀವಾಳನ್ನು ಕೈಯ್ಯಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಪ್ರಕಟಿಸಿದ್ದು. ಡ್ರೆಸ್ಸಿಂಗ್ ರೂಮ್‌ನಲ್ಲಿ ಝೀವಾ ಪ್ರಥಮ ಬಾರಿಗೆ ಪ್ರವೇಶಿಸಿದ್ದಾಳೆ ಎಂದು ಬರೆದಿದ್ದಾರೆ. ಅಪ್ಪನ ಮುಖವನ್ನು ದಿಟ್ಟಿಸಿ ನೋಡುತ್ತಿರುವ ಝೀವಾಳ ಮುದ್ದು ಮುಖವೀಗ ಈಗ ಎಲ್ಲರನ್ನು ಆಕರ್ಷಿಸುತ್ತಿದೆ. 

Share this Story:

Follow Webdunia kannada