Webdunia - Bharat's app for daily news and videos

Install App

ಮೊಹಮ್ಮದ್ ಶಮಿ ಪತ್ನಿಯ ಬಗ್ಗೆ ಬಂತೊಂದು ಶಾಕಿಂಗ್ ಸತ್ಯ!

Webdunia
ಗುರುವಾರ, 15 ಮಾರ್ಚ್ 2018 (09:17 IST)
ಕೋಲ್ಕೊತ್ತಾ: ಪತಿ ಮೊಹಮ್ಮದ್ ಶಮಿ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದ ಪತ್ನಿ ಹಸೀನ್ ಜಹಾನ್ ವಿರುದ್ಧ ಹೊಸದೊಂದು ಮಾಹಿತಿ ಹೊರಬಿದ್ದಿದೆ.
 

ಶಮಿ ಪತ್ನಿ ಹಸೀನ್ ಗೆ ಈ ಮೊದಲು ಮದುವೆಯಾಗಿತ್ತು. ಪಶ್ಚಿಮ ಬಂಗಾಲದ ಸೈಫುದ್ದೀನ್ ಎಂಬ ಮಧ್ಯಮ ವರ್ಗದ ವ್ಯಕ್ತಿಯೊಂದಿಗೆ ಹಸೀನ್ ಗೆ ಈ ಮೊದಲು ಮದುವೆಯಾಗಿತ್ತು. ಈ ಮದುವೆಯಿಂದ ಹಸೀನ್ ಗೆ ಎರಡು ಮಕ್ಕಳಾಗಿದ್ದರು. ಆದರೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲು ಹಠ ಹಿಡಿದಿದ್ದ ಕಾರಣಕ್ಕೆ ಮೊದಲ ಪತಿಗೆ ಹಸೀನ್ ವಿಚ್ಛೇದನ ನೀಡಿದ್ದರು ಎಂದು ಸ್ವತಃ ಸೈಪುದ್ದೀನ್ ಬಹಿರಂಗಪಡಿಸಿದ್ದಾರೆ.

ಶಮಿ ಜತೆ ಮದುವೆಯಾಗುವವರೆಗೂ  ಆ ಮಕ್ಕಳಿಬ್ಬರೂ ತಾಯಿ ಜತೆ ವಾಸಿಸುತ್ತಿದ್ದರು. ಆದರೆ ಎರಡನೇ ಮದುವೆ ಬಳಿಕ ಅಪ್ಪನೊಂದಿಗೆ ನೆಲೆಸಿದ್ದಾರೆ. ಈಗಲೂ ರಜಾ ದಿನಗಳಲ್ಲಿ ಅಮ್ಮನ ಜತೆ ಮಕ್ಕಳು ಕೂಡಿಕೊಳ್ಳುತ್ತಾರಂತೆ. ಇದೀಗ ಸೈಫುದ್ದೀನ್ ಮತ್ತು ಮಕ್ಕಳು ಹಸೀನ್ ವೈವಾಹಿಕ ಜೀವನ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ಶಮಿ ಮತ್ತು ಪತ್ನಿ ನಡುವೆ ಆಸ್ತಿಗಾಗಿ ಈ ಬಿರುಕು ಏರ್ಪಟ್ಟಿದೆ ಎನ್ನಲಾಗಿದೆ. 15 ಕೋಟಿ ರೂ. ಬೆಲೆಯ ನಿವೇಶನದ ಒಡೆತನಕ್ಕಾಗಿ ಇವರಿಬ್ಬರ ನಡುವೆ ವೈಮನಸ್ಯ ಏರ್ಪಟ್ಟಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ, ಹಸೀನ್ ತಂದೆಯೇ ಶಮಿ ಒಳ್ಳೆಯ ಹುಡುಗ. ಇವರಿಬ್ಬರ ನಡುವೆ ಯಾಕೆ ವೈಮನಸ್ಯ ಏರ್ಪಟ್ಟಿತು ಎಂಬುದು ಅವರಿಬ್ಬರಿಗೇ ಗೊತ್ತು ಎಂದಿರುವುದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಮುಂದಿನ ಸುದ್ದಿ
Show comments