ಅಸಭ್ಯವಾಗಿ ನಡೆದುಕೊಂಡವನ ಬೆವರಿಳಿಸಿದ ಮಿಥಾಲಿ ರಾಜ್

Webdunia
ಮಂಗಳವಾರ, 22 ಆಗಸ್ಟ್ 2017 (09:05 IST)
ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜತೆ ವ್ಯಕ್ತಿಯೊಬ್ಬ ಟ್ವಿಟರ್ ನಲ್ಲಿ ಮುಜುಗರ ತರುವಂತಹ ಪ್ರಶ್ನೆ ಕೇಳಲು ಹೋಗಿ ಖಡಕ್ ಉತ್ತರ ಪಡೆದಿದ್ದಾನೆ.

 
ಆಗಿದ್ದೇನು?: ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಮಿಥಾಲಿ ರಾಜ್, ಸಹ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ಮಾಜಿ ಆಟಗಾರ್ತಿಯರಾದ ನೋಶಿನ್ ಆಲ್ ಖಾದಿರ್ ಮತ್ತು ಮಮತಾ ಮಾಬೆನ್ ಜತೆ ಫೋಟೋ ತೆಗೆಸಿಕೊಂಡು ಟ್ವಿಟರ್ ನಲ್ಲಿ ಹಾಕಿದ್ದರು.

ಇದರ ಕೆಳಗೆ ವಿಶೇಷವಾದ ಮಹಿಳೆಯರೊಂದಿಗಿರುವುದು ಅಮೂಲ್ಯ ಕ್ಷಣ ಎಂದು ಬರೆದಿದ್ದರು. ಈ ಫೋಟೋದಲ್ಲಿ ಮಿಥಾಲಿ ಎಡಕಂಕುಳಿನ ಬಳಿ ಬಟ್ಟೆ ಸ್ವಲ್ಪ ಒದ್ದೆಯಾಗಿತ್ತು. ಹೀಗಾಗಿ ಅಭಿಮಾನಿಯೊಬ್ಬ ಕ್ಷಮಿಸಿ ನಾಯಕಿ, ನೋಡಲು ಕೆಟ್ಟದಾಗಿದೆ. ನಿಮ್ಮ ಕಂಕುಳಿನ ಬಳಿ ಒದ್ದೆಯಾಗಿದೆ ಎಂದು ಬರೆದಿದ್ದ.

ಇದರಿಂದ ಕೆರಳಿದ ಮಿಥಾಲಿ, ನಾನು ಬೆವರು ಹರಿಸಿ ಶ್ರಮಪಟ್ಟಿರುವುದರಿಂದಲೇ ಇಂದು ಈ ಸ್ಥಾನದಲ್ಲಿದ್ದೇನೆ. ನಾನು ಹೋಗಿದ್ದು ಕ್ರಿಕೆಟ್ ಅಕಾಡೆಮಿ ಉದ್ಘಾಟನೆಗೆ. ಇದರಲ್ಲಿ ನನಗೆ ಅವಮಾನವಾಗುವಂತಹದ್ದು ಏನೂ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ.. ರಾಹುಲ್ ಗಾಂಧಿ ವಿಚಾರವಾಗಿ ಎಡವಟ್ಟು ಮಾಡಿಕೊಂಡ ಕಪಿಲ್ ಸಿಬಲ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments