Select Your Language

Notifications

webdunia
webdunia
webdunia
webdunia

ಪ್ರಾಣ ಸ್ನೇಹಿತರನ್ನು ಬಚಾವ್ ಮಾಡಿದ ಕೊಹ್ಲಿ

ಪ್ರಾಣ ಸ್ನೇಹಿತರನ್ನು ಬಚಾವ್ ಮಾಡಿದ ಕೊಹ್ಲಿ
ನವದೆಹಲಿ , ಬುಧವಾರ, 14 ಸೆಪ್ಟಂಬರ್ 2016 (11:18 IST)
ಇದೇ ತಿಂಗಳಲ್ಲಿ ಪ್ರಾರಂಭವಾಗಲಿರುವ ಕಿವೀಸ್ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆಯೆಯಾಗುವುದಿಲ್ಲವೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಕಳೆದೊಂದು ವರ್ಷದಿಂದ ಟೆಸ್ಟ್‌ನಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರೂ ಇವರಿಬ್ಬರನ್ನು ಉಳಿಸಿಕೊಳ್ಳುವ ಮೂಲಕ ಆಯ್ಕೆ ಸಮಿತಿ ಅಚ್ಚರಿಯನ್ನು ಮೂಡಿಸಿದೆ.

ಅರ್ಹತೆ ಇರದಿದ್ದರೂ ಅವಕಾಶ ನೀಡಲಾಗಿದೆ ಎಂಬುದು ಹಲವಾರು ಪ್ರಶ್ನೆಗಳನ್ನು ತಂದಿಟ್ಟಿದೆ. ಆದರೆ ಪದೇ ಪದೇ ಫ್ಲಾಪ್ ಆಗುತ್ತಿರುವ ಇವರಿಗೆ ಚಾನ್ಸ್ ನೀಡಿರುವ ಹಿಂದಿರುವ ರಹಸ್ಯವೇನು ಎಂಬುದೀಗ ಗುಟ್ಟಾಗಿ ಉಳಿದಿಲ್ಲ. ಅದೇನಂತೀರಾ? ಕಳಪೆ ಫಾರ್ಮನಲ್ಲಿದ್ದವರನ್ನು ಸೇಫ್ ಮಾಡಿದ್ದು ತಂಡದ ನಾಯಕ ವಿರಾಟ್ ಕೊಹ್ಲಿ ಅವರಂತೆ. 
 
ಎಲ್ಲವೂ ಅಂದುಕೊಂಡಂತೆ ಆದರೆ ರೈನಾ ಮತ್ತು ಧವನ್ ಬದಲಾಗಿ ಬೇರೆಯವರಿಗೆ ಚಾನ್ಸ್ ಸಿಗಬೇಕಿತ್ತು. ಆದರೆ ರೈನಾ ಮತ್ತು ಧವನ್ ಅವರನ್ನು ಉಳಿಸಿಕೊಳ್ಳಲಾಗಿದೆ. ಅದಕ್ಕೆ ಕಾರಣ ಎಂದು ಎಲ್ಲರೂ ಈಗ ಕೊಹ್ಲಿಯತ್ತ ಬೆರಳು ತೋರುತ್ತಿದ್ದಾರೆ.
 
ಹೌದು, ರೈನಾ ಮತ್ತು ಧವನ್ ಕೊಹ್ಲಿ ಅವರಿಗೆ ಆಪ್ತ ಮಿತ್ರರಂತೆ. ದೆಹಲಿ ಪರ ರಣಜಿ ಆಡುವಾಗಲೇ ಈ ಮೂವರಲ್ಲಿ ಆಳವಾದ ಸ್ನೇಹವಿತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿ ತಮ್ಮ ಪ್ರಾಣ ಸ್ನೇಹಿತರನ್ನು ಉಳಿಸಿಕೊಳ್ಳಲು ಕೊಹ್ಲಿ ತಮ್ಮ ಪ್ರಭಾವವನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ ಎಂಬುದು ಕೆಲವರ ವಾದ. 
 
ಜತೆಗೆ ಕೊಹ್ಲಿ ನೇತೃತ್ವದಲ್ಲಿ ತಂಡ ತೋರುತ್ತಿರುವ ಗೆಲುವಿನ ರಿದಂ‌ನ್ನು ಬ್ರೇಕ್ ಮಾಡೋದು ಆಯ್ಕೆ ಸಮಿತಿಗೆ ಬೇಕಿರಲಿಲ್ಲ. ಸ್ನೇಹಿತರನ್ನು ತಂಡದಿಂದ ಬಿಟ್ಟು ಕೊಹ್ಲಿ ಅವರನ್ನು ಅಸಮಾಧಾನಕ್ಕೆ ತಳ್ಳುವುದು ಸಂದೀಪ್ ಪಾಟೀಲ್ ತಂಡಕ್ಕೆ ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ತಮ್ಮ ಕ್ರಮವನ್ನು ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ ಸಹ. ಏಕದಿನ ಕ್ರಿಕೆಟ್‌ನಲ್ಲಿ ಗೇಮ್ ಚೇಂಜರ್ ಆಗಿರುವ ರೈನಾ ಮತ್ತು ಧವನ್ ಅವರಿಗೆ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ ಎಂಬುವುದು ಅವರ ವಾದ. ಸಮರ್ಥ ಯುವ ತಂಡವನ್ನು ಕಟ್ಟುವ ಉದ್ದೇಶವೂ ಇದರಲ್ಲಿದೆ. 
 
ಈ ಬಾರಿ ಹಿರಿಯ ಆಟಗಾರ ಗೌತಮ್ ಗಂಭೀರ್ ಅವರಿಗೆ ಅವಕಾಶ ಸಿಗಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಹಿರಿಯ ಆಟಗಾರರಿಗೆ ಇನ್ನು ಅವಕಾಶ ನೀಡುವುದಿಲ್ಲವೆನ್ನುವುದನ್ನು ಸಹ ಆಯ್ಕೆ ಸಮಿತಿ ಸೂಚ್ಯವಾಗಿ ತೋರಿಸಿಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಸ್ವರ್ಣ