Select Your Language

Notifications

webdunia
webdunia
webdunia
webdunia

ಕರ್ನಾಟಕಕ್ಕೆ ಇರಾನಿ ಟ್ರೋಫಿ

ಕರ್ನಾಟಕಕ್ಕೆ ಇರಾನಿ ಟ್ರೋಫಿ
ಬೆಂಗಳೂರು , ಶನಿವಾರ, 21 ಮಾರ್ಚ್ 2015 (12:48 IST)
ಇತ್ತೀಚಿಗೆ ರಣಜಿ ಟ್ರೋಫಿ  ಜಯಿಸಿದ್ದ ಕರ್ನಾಟಕ ತಂಡ ಮತ್ತೀಗ ಎರಡನೇ ಬಾರಿಗೆ ಇರಾನಿ ಟ್ರೋಫಿ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. 

ಶೇಷ ಭಾರತ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ 246 ರನ್‌ಗಳ ಭರ್ಜರಿ  ಗೆಲುವನ್ನು ಕಂಡಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಕೇದಾರ್‌ ಜಾದವ್‌ 56 ರನ್‌ಗಳನ್ನು ಗಳಿಸಿದ್ದು ಬಿಟ್ಟರೆ ಶೇಷ ಭಾರತದ ಯಾವುದೇ ಬ್ಯಾಟ್ಸ್‌ಮನ್‌ಗಳು  ಪ್ರತಿರೋಧ ತೋರಲಿಲ್ಲ. ಪರಿಣಾಮ ತಂಡ 156 ರನ್‌ಗಳಿಗೆ ಆಲೌಟ್‌ ಆಗಿ ಸೋಲನ್ನಪ್ಪಿತು.
 
ಪ್ರಥಮ ಇನ್ನಿಂಗ್ಸ್‌ನಲ್ಲಿ ಪೇಲವ ಪ್ರದರ್ಶನ ನೀಡಿದ್ದ ಕರ್ನಾಟಕ 244 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಆದರೆ  2ನೇ ಇನಿಂಗ್ಸ್‌ ಬ್ಯಾಟಿಂಗ್‌ ಲಯ ಕಂಡುಕೊಂಡ ಬ್ಯಾಟ್ಸಮನ್‌ಗಳು ಉತ್ತಮ ಮೊತ್ತ ಕಲೆ ಹಾಕಿದರು.  ಮನೀಶ್‌ ಪಾಂಡೆ (122) ಶತಕ ಮತ್ತು  ಆರ್‌.ಸಮರ್ಥ್‌- 81 ಕರುಣ್‌ ನಾಯರ್‌-  80 ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು. 
 
ಆದರೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಶೇಷ ಭಾರತ ತಂಡದ ಯಾವ ಆಟಗಾರರು ಪ್ರತಿರೋಧ ತೋರುವ ಮನಸ್ಸು ಮಾಡಲಿಲ್ಲ.  ಕೇದಾರ್‌ ಜಾಧವ್‌ (56 ರನ್‌) ಮಾತ್ರ ಅರ್ಧ ಶತಕ ಗಳಿಸಿ ನಿರ್ಗಮಿಸಿದರು. ನಾಯಕ ಮನೋಜ್‌ ತಿವಾರಿ 24, ಜೀವನ್‌ಜೋತ್‌ ಸಿಂಗ್‌ 38ರ ಮೊತ್ತಕ್ಕೆ ಮರಳಿದರೆ ರಿಷಿ ಧವನ್‌, ಜಯಂತ್‌ ಯಾದವ್‌ ಹಾಗೂ ವರುಣ್‌ ಆರೋನ್‌ ತಲಾ 10 ರನ್ ಗಳಿಸಿದರು.  ಉಳಿದ ಯಾವ ಆಟಗಾರರು ಎರಡಂಕಿ ಮೊತ್ತ ತಲುಪಲಿಲ್ಲ. ಪರಿಣಾಮ ಕರ್ನಾಟಕ ನೀಡಿದ 403 ಮೊತ್ತದ ಸನಿಹಕ್ಕೂ ಸುಳಿಯಲು ವಿಫಲವಾದ ಶೇಷ ಭಾರತ 43.3 ಓವರ್‌ಗಳಲ್ಲಿ ಕೇವಲ 156 ರನ್‌ಗೆ ಆಲೌಟಾಯಿತು. ಶ್ರೇಯಸ್‌ ಗೋಪಾಲ್‌ (39ಕ್ಕೆ4) ಮತ್ತು ಅಭಿಮನ್ಯು ಮಿಥುನ್‌ (40 ಕ್ಕೆ 3 ವಿಕೆಟ್‌) ಭಾರತ ಇತರರ ತಂಡಕ್ಕೆ ನೆಲ ಕಚ್ಚಿ ನಿಲ್ಲಲು ಅವಕಾಶವನ್ನೇ ನೀಡಲಿಲ್ಲ. ಶರತ್‌ ಹಾಗೂ ಅರವಿಂದ್‌ ತಲಾ 1 ವಿಕೆಟ್ ಪಡೆದರು. 
 
ಶೇಷ ಭಾರತದ ಪರ ಶಾರ್ದೂಲ್‌ ಠಾಕೂರ್‌ 86ಕ್ಕೆ 5 ವಿಕೆಟ್ ಪಡೆದು ಗಮನ ಸೆಳೆದರು.

Share this Story:

Follow Webdunia kannada