Select Your Language

Notifications

webdunia
webdunia
webdunia
webdunia

ಜಡೇಜಾ-ಅಶ್ವಿನ್ ಜೋಡಿ ಮಾಡಿದ ಈ ದಾಖಲೆ ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲು

ಜಡೇಜಾ-ಅಶ್ವಿನ್ ಜೋಡಿ ಮಾಡಿದ ಈ ದಾಖಲೆ ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲು
Mumbai , ಗುರುವಾರ, 9 ಮಾರ್ಚ್ 2017 (08:53 IST)
ಮುಂಬೈ: ರವಿಚಂದ್ರನ್ ಅಶ್ವಿನ್- ರವೀಂದ್ರ ಜಡೇಜಾ ನಡುವೆ ಭಾರತ ತಂಡದ ಶ್ರೇಷ್ಠ ಸ್ಪಿನ್ನರ್ ಯಾರು? ಹೀಗೊಂದು ಪ್ರಶ್ನೆಗೆ ಐಸಿಸಿ ಶ್ರೇಯಾಂಕ ಸಮಾನಾಂತರ ಉತ್ತರ ಕೊಟ್ಟಿದೆ.

 
ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಅಶ್ವಿನ್ ಆಗಿದ್ದರೆ, ನಂ.2 ಸ್ಥಾನದಲ್ಲಿ ಜಡೇಜಾ ಇದ್ದರು. ಆದರೆ ಆಸೀಸ್ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಜಡೇಜಾ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತರೆ, ಅಶ್ವಿನ್ ದ್ವಿತೀಯ ಇನಿಂಗ್ಸ್ ನಲ್ಲಿ ಅಷ್ಟೇ ವಿಕೆಟ್ ಕಿತ್ತು ತಾವಿಬ್ಬರು ಸಮಬಲರು ಎಂದು ತೋರಿಸಿಕೊಟ್ಟಿದ್ದಾರೆ.

ಸಹಜವಾಗಿಯೇ ಐಸಿಸಿ ಶ್ರೇಯಾಂಕದಲ್ಲಿ ಇವರಿಬ್ಬರೂ ಇದೀಗ ನಂ.1 ಆಗಿ ಹೊರ ಹೊಮ್ಮಿದ್ದಾರೆ. ಇಂತಹ ಬೆಳವಣಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ. ಇಬ್ಬರೂ ಒಂದೇ ದೇಶದ ಬೌಲರ್ ಗಳು, ಅಗ್ರ ಸ್ಥಾನದಲ್ಲೇ ಇಬ್ಬರೂ ಇರುವುದು ದಾಖಲೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಂಗಾನದಿಯಲ್ಲಿ ಅಸ್ಥಿ ವಿಸರ್ಜನೆ: ಗೆಳೆಯನ ಕೊನೆಯಾಸೆ ನೆರವೇರಿಸಿದ ಸ್ವೀವ್ ವಾ