Select Your Language

Notifications

webdunia
webdunia
webdunia
webdunia

ಭಾರತ 'ಎ' ತಂಡಕ್ಕೆ ಕರುಣ್ ಉಪನಾಯಕ

ಭಾರತ 'ಎ' ತಂಡಕ್ಕೆ ಕರುಣ್ ಉಪನಾಯಕ
ಚೆನ್ನೈ , ಭಾನುವಾರ, 2 ಆಗಸ್ಟ್ 2015 (11:21 IST)
ಆಗಸ್ಟ್ 5 ರಿಂದ ಆರಂಭವಾಗಲಿರುವ  ಆಸ್ಟ್ರೇಲಿಯಾ ‘ಎ’ ಮತ್ತು ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ತ್ರಿಕೋನ ಸರಣಿಗೆ ನಾಯಕರಾಗಿ ದೆಹಲಿ ಮೂಲದ ಉನ್ಮುಕ್ತ್ ಚಾಂದ್ ಅವರನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಕರುಣ್ ನಾಯರ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 
 
ಆಸ್ಟ್ರೇಲಿಯಾ ವಿರುದ್ಧ  ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರ ಫಲವಾಗಿ ಕರುಣ್‌ ನಾಯರ್‌ ಅವರನ್ನು ಈ ಅವಕಾಶ ಹುಡುಕಿಕೊಂಡು ಬಂದಿದೆ. 
 
ಕರ್ನಾಟಕದ ಮಯಂಕ್‌ ಅಗರವಾಲ್‌ ಮತ್ತು ಮನೀಷ್‌ ಪಾಂಡೆ ಕೂಡಾ ತಂಡದಲ್ಲಿದ್ದಾರೆ.
 
ತ್ರಿಕೋನ ಸರಣಿಯ ಬಳಿಕ ಆಗಸ್ಟ್ 18 ರಿಂದ ವಯನಾಡಿನಲ್ಲಿ  ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಅಂಬಾಟಿ ರಾಯುಡು ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್‌ ತಂಡದಲ್ಲಿದ್ದಾರೆ. 
 
ತಂಡ ಇಂತಿದೆ: 
ಏಕದಿನ ಸರಣಿ: ಉನ್ಮುಕ್ತ್‌ ಚಾಂದ್‌ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ), ಮಯಂಕ್‌ ಅಗರ ವಾಲ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಸಂಜು ಸ್ಯಾಮ್ಸನ್‌ ‌, ಕರಣ್‌ ಶರ್ಮಾ, ಧವಳ್‌ ಕುಲಕರ್ಣಿ, ಅಕ್ಷರ್‌ ಪಟೇಲ್‌, ಪರ್ವೇಜ್‌ ರಸೂಲ್, ಸಂದೀಪ್‌ ಶರ್ಮಾ, ರುಶ್‌ ಕಲಾರಿಯಾ, ಮಂದೀಪ್‌ ಸಿಂಗ್‌, ಗುರ್‌ಕೀರತ್‌ ಸಿಂಗ್‌ ಮಾನ್‌ ಮತ್ತು ರಿಶಿ ಧವನ್‌.
 
ಟೆಸ್ಟ್‌ ತಂಡ: ಅಂಬಟಿ ರಾಯುಡು (ನಾಯಕ), ಕರುಣ್‌ ನಾಯರ್‌, ಅಭಿನವ್‌ ಮುಕುಂದ್‌‌, ಶ್ರೇಯಸ್‌ ಅಯ್ಯರ್‌, ಬಾಬಾ ಅಪರಾಜಿತ್‌, ಅಂಕುಶ್‌ ಬೇನ್ಸ್,  ವಿಜಯ್‌ ಶಂಕರ್‌, ಜಯಂತ್‌ ಯಾದವ್‌, ಅಕ್ಷರ್‌ ಪಟೇಲ್‌, ಕರಣ್‌ ಶರ್ಮಾ, ಅಭಿಮನ್ಯು ಮಿಥುನ್‌, ಶ್ರಾದೂಲ್‌ ಠಾಕೂರ್‌, ಈಶ್ವರ್‌ ಪಾಂಡೆ, ಶೆಲ್ಡನ್‌ ಜಾಕ್ಸನ್‌ ಮತ್ತು ಜೀವನ್‌ಜ್ಯೋತ್‌ ಸಿಂಗ್‌.

Share this Story:

Follow Webdunia kannada