Webdunia - Bharat's app for daily news and videos

Install App

ಆಶಿಷ್ ನೆಹ್ರಾ ಅವರಿಂದ ಬ್ಯಾಟ್ಸ್‌ಮನ್‌ಗಳಿಗೆ ವಂಚಿಸುವ ಕಲೆ ಕಲಿತೆ: ಭುವನೇಶ್ವರ್

Webdunia
ಶನಿವಾರ, 28 ಮೇ 2016 (19:25 IST)
ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬ್ಯಾಟ್ಸ್‌ಮನ್‌ಗಳಿಗೆ ವಂಚಿಸುವ ಕಲೆಯನ್ನು ಬೋಧಿಸಿದ ಆಶಿಷ್ ನೆಹ್ರಾ ಅವರಿಗೆ ಯಶಸ್ಸಿನ  ಕ್ರೆಡಿಟ್ ಸಲ್ಲುತ್ತದೆಂದು ಹೇಳಿದ್ದಾರೆ. 
 
ಸನ್‌ರೈಸರ್ಸ್ ಪರ ನೆಹ್ರಾ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತಿದ್ದರು.  ಹಿರಿಯ ಬೌಲರ್ ಸಲಹೆಯು ತಮಗೆ ಬೌಲಿಂಗ್ ಕೌಶಲ್ಯಗಳನ್ನು ಕಲಿಯಲು ನೆರವಾಯಿತು ಮತ್ತು  ನಾಕ್ ಔಟ್ ಪಂದ್ಯಗಳಲ್ಲಿ ಇದು ನಿರ್ಣಾಯಕವಾಗಿ ಪರಿಣಮಿಸಿತು.
 
 ನೀವು ಬೌಲಿಂಗ್ ಮಾಡುವಾಗ ಫೀಲ್ಡ್ ಹೇಗೆ ಸೆಟ್ ಮಾಡುತ್ತೀರಿ, ಬ್ಯಾಟ್ಸ್‌ಮನ್ ಬಲವೇನು ಅವರನ್ನು ವಂಚಿಸುವುದು ಹೇಗೆ ಮುಂತಾದುವನ್ನು ಅವರು ಕಲಿಸಿದ್ದು ನನಗೆ ನೆರವಾಯಿತು. ಬಹುಶಃ ಸ್ರಾನ್‌ಗೆ ಕೂಡ ಅದೇ ರೀತಿ ನೆರವಾಗಲು ಪ್ರಯತ್ನಿಸಿದೆ. ಆದರೆ ನೆಹ್ರಾ ಅವರ ಅನುಭವದಿಂದ ಆಡುವ ಆಟ ನನಗೆ ಸಾಧ್ಯವಿಲ್ಲ. ಆದರೆ ಅವರ ಪಾತ್ರವನ್ನು ಅನುಕರಿಸಲು ನಾನು ಪ್ರಯತ್ನಿಸಿದ್ದೇನೆ ಎಂದು ಕುಮಾರ್ ಹೇಳಿದರು. 
 
 ಇಂದಿನ ದಿನಗಳಲ್ಲಿ ನೀವು ಫೀಲ್ಡ್ ಸೆಟ್ ಮಾಡುವುದನ್ನು ನೋಡಿ ಬ್ಯಾಟ್ಸ್‌ಮನ್ ಯಾವ ರೀತಿ ಬೌಲ್ ಮಾಡುತ್ತೀರೆಂದು ಊಹಿಸುತ್ತಾರೆ. ಆದರೆ ಎದುರಾಳಿಯನ್ನು ನಾವು ಹೆಚ್ಚು ಅರ್ಥಮಾಡಿಕೊಂಡಂತೆ ನಾವು ಸೆಟ್ ಮಾಡಿದ ಫೀಲ್ಡಿಂಗ್ ವಿರುದ್ಧ ಬೌಲ್ ಮಾಡಲು ಯತ್ನಿಸುತ್ತೇವೆ. ನಾವು ಬ್ಯಾಟ್ಸ್‌ಮನ್‌ನನ್ನು ವಂಚಿಸಿ ರನ್‌ಗಳನ್ನು ನಿಯಂತ್ರಿಸಿ ಔಟ್ ಮಾಡಲು ಪ್ರಯತ್ನಿಸುತ್ತೇವೆ ಎಂದು ಪಂದ್ಯಾವಳಿಯಲ್ಲಿ ಅಗ್ರ ವಿಕೆಟ್ ಗಳಿಸಿ ನೇರಳೆ ಕ್ಯಾಪ್ ಧರಿಸಿದ ಕುಮಾರ್ ಹೇಳಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments