Select Your Language

Notifications

webdunia
webdunia
webdunia
webdunia

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮೋಹಿತ್ ಶರ್ಮಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮೋಹಿತ್ ಶರ್ಮಾ
ನವದೆಹಲಿ , ಗುರುವಾರ, 10 ಮಾರ್ಚ್ 2016 (11:39 IST)
ಭಾರತೀಯ ಕ್ರಿಕೆಟಿಗರ ಮದುವೆ ಸೀಸನ್ ಮುಂದುವರೆದಿದ್ದು ಹರಿಯಾಣ ಮೂಲದ ವೇಗದ ಬೌಲರ್ ಮೋಹಿತ್ ಶರ್ಮ ತಮ್ಮ ದೀರ್ಘಕಾಲದ ಗೆಳತಿ ಶ್ವೇತಾ ಜತೆಗೆ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮೂಲಗಳ ಪ್ರಕಾರ ದೆಹಲಿಯ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. 27 ವರ್ಷದ ಯುವ ಕ್ರಿಕೆಟಿಗ ಕಳೆದ ಜನೇವರಿ ತಿಂಗಳಲ್ಲಿ ಶ್ವೇತಾ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 
 
ಮಾಧ್ಯಮಗಳ ವರದಿಯ ಪ್ರಕಾರ ಶ್ವೇತಾ  ಕೋಲ್ಕತ್ತಾದಲ್ಲಿ ಹೊಟೆಲ್ ಮ್ಯಾನೇಜ್‌ಮೆಂಟ್‌ನ್ನು ಓದುತ್ತಿದ್ದಾರೆ. 
 
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ದೆಹಲಿ ಆಟಗಾರ ಉನ್ಮುಕ್ತ್ ಚಂದ್, ಪರ್ವಿಂದರ್ ಅವಾನ, ಜೋಗಿಂದರ್ ಶರ್ಮ  ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. 
 
ಸದ್ಯ ಗಾಯದಿಂದಾಗಿ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗಿರುವ ಮೋಹಿತ್ ಶರ್ಮ ಭಾರತ ಪರ 26 ಏಕದಿನ ಮತ್ತು 8 ಟಿ20 ಪಂದ್ಯ ಆಡಿದ್ದಾರೆ. 2014ರ ಟಿ20 ವಿಶ್ವಕಪ್ ಮತ್ತು 2015ರ ಏಕದಿನ ವಿಶ್ವಕಪ್‌ನಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು.
 
ಸ್ಪೋಟಕ ಬ್ಯಾಟ್ಸ್‌ಮನ್,ಕನ್ನಡಿಗ ರಾಬಿನ್ ಉತ್ತಪ್ಪ, ಧವಲ್ ಕುಲಕರ್ಣಿ ಸಹ ಈ ತಿಂಗಳಲ್ಲಿಯೇ ಹಸೆಮಣೆ ಏರಿದ್ದರು. 

Share this Story:

Follow Webdunia kannada