Webdunia - Bharat's app for daily news and videos

Install App

ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪಾಂಡೆ ಬಯಕೆ

Webdunia
ಶುಕ್ರವಾರ, 10 ಜೂನ್ 2016 (16:37 IST)
ಮನೀಷ್ ಪಾಂಡೆ ಜಿಂಬಾಬ್ವೆಯಲ್ಲಿ ಚೊಚ್ಚಲ ಪಂದ್ಯವಾಡಿದ್ದರು. ಈಗ ಭಾರತದ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿಯೊಂದಿಗೆ ಮತ್ತೆ ಆಫ್ರಿಕನ್ ರಾಷ್ಟ್ರಕ್ಕೆ ಕಾಲಿರಿಸಿದ್ದಾರೆ. ಪಾಂಡೆ ಶನಿವಾರ ಹರಾರೆ ಕ್ರೀಡಾ ಕ್ಲಬ್‌ನಲ್ಲಿ ಮೊದಲ ಏಕದಿನ ಪಂದ್ಯವಾಡಲಿದ್ದಾರೆ.

ಜಿಂಬಾಬ್ವೆಯಲ್ಲಿ ಹಿಂದಿನ ಚೊಚ್ಚಲ ಇನ್ನಿಂಗ್ಸ್‌‍ನಲ್ಲಿ 71 ರನ್ ಗಳಿಸಿದ್ದ ಪಾಂಡೆ,  ಆಸ್ಟ್ರೇಲಿಯಾದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಸಿಡ್ನಿಯಲ್ಲಿ ಪಂದ್ಯ ಗೆಲುವಿನ 104 ರನ್ ಗಳಿಸಿ ಭಾರತಕ್ಕೆ ಏಕಮಾತ್ರ ಜಯವನ್ನು ತಂದಿತ್ತಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಗೆ ಮುನ್ನ, ಪಾಂಡೆ ಕಳೆದ ವರ್ಷ ತಮ್ಮ ಕನಸನ್ನು ನನಸು ಮಾಡಿಕೊಂಡ ಕ್ಷಣವನ್ನು ಮೆಲಕು ಹಾಕಿದರು. 
 
 ಇದು ಪುನಃ ಹೊಸ ಆರಂಭವಾಗಲಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಜಿಂಬಾಬ್ವೆಯಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದೆ. ಇಲ್ಲಿಗೆ ಪುನಃ ಆಗಮಿಸಿ ಆಗಿನ ನೆನಪುಗಳನ್ನು ಮೆಲಕು ಹಾಕಿ, ಭಾರತಕ್ಕೆ ರನ್ ಸ್ಕೋರ್ ಮಾಡುವುದು ನನ್ನ ಗುರಿಯಾಗಿದೆ ಎಂದು ಅವರು ಹೇಳಿದರು.
 
 ಸಿಡ್ನಿಯಲ್ಲಿ ಶತಕ ಬಾರಿಸಿದ್ದರೂ ಪಾಂಡೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ. ಭಾರತಕ್ಕೆ ಇನ್ನಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡುವ ಮೂಲಕ ಕಾಯಂ ಸ್ಥಾನವನ್ನು ಪಡೆಯಲು ಅವರು ಬಯಸಿದ್ದಾರೆ. ನನ್ನ ಗುರಿ ಪ್ರದರ್ಶನ ನೀಡುವುದಾಗಿದ್ದು, ಭಾರತದ 11 ಆಟಗಾರರ ತಂಡದಲ್ಲಿ ಹೊಂದಿಕೆಯಾಗಿ ಕಾಯಂ ಆಟಗಾರನಾಗುವುದು ತಮ್ಮ ಗುರಿ ಎಂದು ಪಾಂಡೆ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments