Webdunia - Bharat's app for daily news and videos

Install App

ಕನಸಿನ ಓಟದಲ್ಲಿ ಪ್ರತಿಯೊಂದು ದಿನವೂ ಹೊಸ ದಿನ: ವಿರಾಟ್ ಕೊಹ್ಲಿ

Webdunia
ಶುಕ್ರವಾರ, 27 ಮೇ 2016 (17:29 IST)
ನವದೆಹಲಿ: ಪ್ರತಿಯೊಂದು ಪಂದ್ಯದಲ್ಲಿ ಸುಧಾರಣೆಯಾಗಬೇಕೆಂಬ ಹಸಿವು ತಮ್ಮನ್ನು ಪ್ರೇರೇಪಿಸುತ್ತಿದೆ ಎಂದು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಪ್ರತಿ ದಿನವೂ ಹೊಸ ದಿನ. ಸುಧಾರಣೆಗೆ ಅವಕಾಶವಿದೆ ಎಂದು ನಾನು ಸದಾ ಭಾವಿಸುತ್ತೇನೆ.  ಪ್ರತಿಯೊಂದು ಪಂದ್ಯದಲ್ಲಿ ನಾನು ಪ್ಲಸ್ ಮತ್ತು ಮೈನಸ್ ಅಂಶಗಳನ್ನು ತೆಗೆದುಕೊಳ್ಳುತ್ತೇನೆ. ಇದು ಸುಧಾರಣೆಗೆ ನೆರವಾಗುತ್ತದೆ. ಶ್ರಮದ ಕೆಲಸ ಮತ್ತು ಶಿಸ್ತಿಗೆ ಯಾವುದೇ ಪರ್ಯಾಯ ಇಲ್ಲ ಎಂದು ಕೊಹ್ಲಿ ಈಮೇಲ್ ಸಂವಾದದಲ್ಲಿ ಸುದ್ದಿಸಂಸ್ಥೆಗೆ ಹೇಳಿದ್ದಾರೆ. 
 
ವಿಶ್ವ ಟಿ 20ಯೊಂದಿಗೆ ಆರಂಭವಾದ ಅವರ ಅಸಾಧಾರಣ ಹಂತವು ಐಪಿಎಲ್‌ನಲ್ಲಿ ಅತ್ಯಧಿಕ ಮಟ್ಟವನ್ನು ಮುಟ್ಟಿ ನಾಲ್ಕು ಶತಕಗಳ ದಾಖಲೆ ಮಾಡಿದ್ದಾರೆ. ಈ ಸೀಸನ್‌ನಲ್ಲಿ 15 ಪಂದ್ಯಗಳಿಂದ 83.54 ಸರಾಸರಿಯಲ್ಲಿದ್ದು, 1000 ರನ್ ಪೂರೈಸಲು ಕೇವಲ 81 ರನ್ ಬೇಕಾಗಿದೆ.
 
ಪ್ರತಿಯೊಬ್ಬ ಕ್ರಿಕೆಟರ್ ಅನುಭವಿಸಿದ ಸಮಸ್ಯೆಯನ್ನು ನಾನೂ ಅನುಭವಿಸಿದೆ. ನಿಮಗೆ ನಿಮ್ಮ ಸ್ಥಾನದ ಬಗ್ಗೆ ಅಭದ್ರತೆ ಕಾಡಿ, ಹತಾಶರಾಗಿ ತಪ್ಪು ಎಸಗುತ್ತೀರಿ. ನೀವು ಚೆನ್ನಾಗಿ ಆಡಬೇಕೆಂದು ಬಯಸುತ್ತೀರಾ, ಆದರೆ ಮೈದಾನದ ಹೊರಗೆ ಮತ್ತು ಒಳಗೆ ನಿಮ್ಮ ಮೇಲೆ ಹತೋಟಿ ಇರುವುದಿಲ್ಲ ಎಂದು ಕೊಹ್ಲಿ  ಆಟಗಾರರ ಸ್ಥಿತಿಯನ್ನು ವಿವರಿಸಿದರು. 
 
ಐಪಿಎಲ್ ನಂತರ ಸ್ಮೈಲ್ ಫೌಂಡೇಶನ್ ಜತೆಗೆ ಚಾರಿಟಿ ಡಿನ್ನರ್ ಆಯೋಜಿಸಿರುವುದಾಗಿ ಕೊಹ್ಲಿ ಹೇಳಿದರು. ಯುವಕರಿಗೆ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಸಾಧ್ಯವಾದಷ್ಟು ನೆರವು ನೀಡುವುದು ತಮ್ಮ ಜವಾಬ್ದಾರಿ ಎಂದು ಕೊಹ್ಲಿ ನುಡಿದರು.
 
ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವನಾದ್ದರಿಂದ ಧರ್ಮಕಾರ್ಯದ ಪ್ರಾಮುಖ್ಯತೆ ಅರ್ಥವಾಗುತ್ತದೆ. ನಾನು ಏನಾದರೂ ಮಾಡಬೇಕೆಂದೂ ಸಮಾಜಕ್ಕೆ ಪುನಃ ಹಿಂತಿರುಗಿಸಬೇಕೆಂಬ ಅಪೇಕ್ಷೆ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಮಕ್ಕಳು ಮತ್ತು ಯುವಕರ ಸಬಲತೆಗೆ ಸಂಬಂಧಿಸಿದ ಯಾವುದೇ ಉದ್ದೇಶಕ್ಕೆ ಬೆಂಬಲಿಸಲು ನಾನು ಮುಂದಿದ್ದೇನೆ ಎಂದು ಹೇಳಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments