Select Your Language

Notifications

webdunia
webdunia
webdunia
webdunia

ನಾನಿನ್ನೂ ಹೊಸಬ ಅದಕ್ಕೇ ಸೀನಿಯರ್ಸ್ ಸಹಾಯ ಪಡೆಯುತ್ತೇನೆ ಎಂದ ವಿರಾಟ್ ಕೊಹ್ಲಿ!

ನಾನಿನ್ನೂ ಹೊಸಬ ಅದಕ್ಕೇ ಸೀನಿಯರ್ಸ್ ಸಹಾಯ ಪಡೆಯುತ್ತೇನೆ ಎಂದ ವಿರಾಟ್ ಕೊಹ್ಲಿ!
Bangalore , ಗುರುವಾರ, 2 ಫೆಬ್ರವರಿ 2017 (09:05 IST)
ಬೆಂಗಳೂರು: ವಿರಾಟ್ ಕೊಹ್ಲಿ ಕ್ರಿಕೆಟ್ ಗೆ ಹೊಸಬರಲ್ಲ. ಆದರೆ ಕಿರು ಮಾದರಿ ಕ್ರಿಕೆಟ್ ನ ನಾಯಕತ್ವ ಹೊತ್ತುಕೊಂಡಿರುವುದು ಇದೇ ಮೊದಲು. ಮೈದಾನದಲ್ಲಿ ಅವರು ಸದಾ ಧೋನಿಯೊಂದಿಗೆ ಚರ್ಚಿಸುವುದಕ್ಕೆ ಅವರೇ ಸಮಜಾಯಿಷಿ ಕೊಟ್ಟಿದ್ದಾರೆ.

 
ಧೋನಿ ನಾಯಕತ್ವದಿಂದ ಕೆಳಗಿಳಿದ ಮೇಲೂ ತಂಡದ ಫೀಲ್ಡಿಂಗ್ ಸಂಯೋಜನೆಯ ವಿಷಯದಲ್ಲಿ ಅವರೇ ಕೊಹ್ಲಿಗಿಂತ ಹೆಚ್ಚು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಒತ್ತಡದ ಸಂದರ್ಭದಲ್ಲಿ ಕೊಹ್ಲಿ ತಡಬಡಾಯಿಸಿದರೆ ಧೋನಿಯೇ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಈ ಬಗ್ಗೆ ಬೆಂಗಳೂರು ಪಂದ್ಯದ ನಂತರ ಕೊಹ್ಲಿಯನ್ನು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದ್ದಾರೆ.

“ನಾನಿನ್ನೂ ಈ ಮಾದರಿಗೆ ಹೊಸಬ. ನನಗಿಂತ ಹೆಚ್ಚು ಟಿ20 ಪಂದ್ಯ ಆಡಿದ ಅನುಭವ ಧೋನಿ, ಯುವರಾಜ್ ಸಿಂಗ್, ಆಶಿಷ್ ನೆಹ್ರಾ ಅವರಿಗಿದೆ. ಹೀಗಾಗಿ ಅವರ ಹೆಚ್ಚು ಅವರ ಸಲಹೆ ಪಡೆಯುತ್ತೇನೆ. ಗೆಲುವಿನ ಪಾಲು ಹಿರಿಯರಿಗೇ ಸಲ್ಲಬೇಕು” ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಧೋನಿಗೆ ಹೊಗಳಿಕೆಯ ಮಹಾಪೂರ ಹರಿಸುವುದನ್ನು ಕೊಹ್ಲಿ ಮರೆಯಲಿಲ್ಲ. ಅಲ್ಲದೆ 13 ನೇ ಓವರ್ ನಲ್ಲಿ ಪಂದ್ಯಕ್ಕೆ ತಿರುವು ನೀಡುವಂತಹ ಓವರ್ ಮಾಡಿದ ಅಮಿತ್ ಮಿಶ್ರಾ,  ಬ್ಯಾಟಿಂಗ್ ನಲ್ಲಿ ಭರ್ಜರಿ ಮೂರು ಸಿಕ್ಸರ್ ಎತ್ತಿ ಮೊತ್ತ 200 ರ ಗಡಿ ದಾಟುವಂತೆ ಮಾಡಿದ ಯುವರಾಜ್ ಸಿಂಗ್ ಕೊಡುಗೆಯನ್ನೂ ಕೊಹ್ಲಿ ವಿಶೇಷವಾಗಿ ಸ್ಮರಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲೇ ಕೆಎಲ್ ರಾಹುಲ್ ಮೇಲೆ ಕೆಂಡ ಕಾರಿದ ವಿರಾಟ್ ಕೊಹ್ಲಿ