ಹೇಗಿದೆ ಸಚಿನ್ ಸಿನಿಮಾ? ಟೀಂ ಇಂಡಿಯಾ ಕ್ರಿಕೆಟಿಗರ ವಿಮರ್ಶೆ ಇಲ್ಲಿದೆ!

Webdunia
ಗುರುವಾರ, 25 ಮೇ 2017 (12:31 IST)
ಮುಂಬೈ: ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಿತ್ರ ಸಚಿನ್ ಎ ಬಿಲಿಯನ್ ಡ್ರೀಮ್ಸ್ ವೀಕ್ಷಿಸಿದ ಟೀಂ ಇಂಡಿಯಾ ಕ್ರಿಕೆಟಿಗರು ಥ್ರಿಲ್ ಆಗಿದ್ದಾರೆ. ಚಿತ್ರ ನೋಡಿದ ಮೇಲೆ ಅವರು ಏನೆಂದರು ಗೊತ್ತಾ?

 
ಸಚಿನ್ ಜತೆಗೇ ಪ್ರೀಮಿಯರ್ ಶೋ ನೋಡಿದ ಕ್ರಿಕೆಟಿಗರು, ದಿಗ್ಗಜನ ಜತೆಗೆ ಫೋಟೋ ತೆಗೆಸಿಕೊಂಡರು. ಅಲ್ಲದೆ, ಚಿತ್ರದ ಬಗ್ಗೆ ಕೆಲವು ಕ್ರಿಕೆಟಿಗರು ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಂಥಾ ಮಹಾನ್ ಕ್ರಿಕೆಟಿಗನ ಜೀವನವನ್ನು ತೆರೆಯ ಮೇಲೆ ನೋಡುತ್ತಿದ್ದರೆ ರೋಮಾಂಚನಾಗುತ್ತದೆ. ನೀವು ನಿಜಕ್ಕೂ ಸ್ಪೂರ್ತಿ ತುಂಬುತ್ತೀರಿ, ನನಗೆ ಮಾತ್ರವಲ್ಲ, ನನ್ನಂತಹ ಬಿಲಿಯನ್ಸ್ ಗೆ  ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಕೆಲವು ಅಭೂತಪೂರ್ವ ನೆನಪುಗಳನ್ನು ಮೆಲುಕು ಹಾಕಿದಂತಾಯಿತು. ನಿಜಕ್ಕೂ ಇಂದಿನ ದಿನ ಅದ್ಭುತವಾಗಿತ್ತು ಎಂದು ಭುವನೇಶ್ವರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶಿಖರ್ ಧವನ್, ನಿಮ್ಮಂತಹ ಕ್ರಿಕೆಟಿಗರನ್ನು ಭೇಟಿ ಮಾಡುವುದೇ ಗೌರವ. ಸಿನಿಮಾ ಅದ್ಭುತವಾಗಿತ್ತು ಎಂದಿದ್ದಾರೆ.

ಸಚಿನ್ ರ ಮುಂಬೈ ಜತೆಗಾರ ಅಜಿಂಕ್ಯಾ ರೆಹಾನೆ ಕೂಡಾ ಧನ್ಯವಾದಗಳು ಸಚಿನ್ ಸರ್. ನೀವು ಅದೆಷ್ಟೋ ಜನರಿಗೆ ಸ್ಪೂರ್ತಿ ಎಂದು ಹೊಗಳಿದ್ದಾರೆ. ನಾಳೆ ಅಧಿಕೃತವಾಗಿ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

IPL Auction 2026: ಕ್ಯಾಮರೂನ್ ಗ್ರೀನ್ ಗೆ 25 ಕೋಟಿ, ಮಹೇಶ್ ಪತಿರಾಣಗೆ 18 ಕೋಟಿ: ಐಪಿಎಲ್ ಭರ್ಜರಿ ಸೇಲ್

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಮುಂದಿನ ಸುದ್ದಿ
Show comments