Webdunia - Bharat's app for daily news and videos

Install App

ಅನಿಲ್ ಕುಂಬ್ಳೆಗೆ ಪತ್ರ ಬರೆದ ಹರ್ಭಜನ್ ಸಿಂಗ್! ಏನಿತ್ತು ಅದರಲ್ಲಿ?

Webdunia
ಗುರುವಾರ, 18 ಮೇ 2017 (06:47 IST)
ಮುಂಬೈ: ಒಂದು ಕಾಲದಲ್ಲಿ ಭಾರತ ತಂಡವನ್ನು ಆಳಿದ್ದ ಹರ್ಭಜನ್ ಸಿಂಗ್ ಇದೀಗ ಅವಕಾಶಕ್ಕಾಗಿ ಪರದಾಡುವಂತಾಗಿದೆ. ಹಾಗಾಗಿ ತಮ್ಮಂತೇ ದೇಶೀಯ ಪಂದ್ಯಗಳಲ್ಲಿ ಆಡುವವರ ಕಷ್ಟವೂ ಅವರಿಗೆ ಅರಿವಾಗಿದೆ.

 
ಹೀಗಾಗಿ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ದೇಶೀ ಕ್ರಿಕೆಟಿಗರ ಹಣಕಾಸಿನ ಸಮಸ್ಯೆಯ ಬಗ್ಗೆ ಬಿಸಿಸಿಐ ಗಮನಕ್ಕೆ ತರುವಂತೆ ಪತ್ರ ಬರೆದಿದ್ದಾರೆ. ಮೇ 21 ರಂದು ಕುಂಬ್ಳೆ ಬಿಸಿಸಿಐನ ಆಡಳತಾಧಿಕಾರಿಗಳ ಎದುರು ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಲಿದ್ದಾರೆ.

ಈ ಸಂದರ್ಭದಲ್ಲಿ ದೇಶೀಯ ಕ್ರಿಕೆಟಿಗರ ವೇತನ ಸಮಸ್ಯೆಯ ಬಗ್ಗೆ ಗಮನಹರಿಸುವಂತೆ ಭಜಿ ಕುಂಬ್ಳೆಗೆ ಮನವಿ ಮಾಡಿದ್ದಾರೆ. ದೇಶೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಆಟಗಾರರಿಗೆ ಕೇವಲ 1.5 ಲಕ್ಷ ರೂ. ಸಂಭಾವನೆ ಸಿಗುತ್ತಿದೆಯಷ್ಟೇ.

ಈ ಬಗ್ಗೆ ಕುಂಬ್ಳೆಗೆ ಭಾವನಾತ್ಮವಾಗಿ ಪತ್ರ ಬರೆದಿರುವ ಭಜಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ‘ಕಳೆದ ಎರಡು ಮೂರು ವರ್ಷಗಳಿಂದ ರಣಜಿ ಆಡುವವನಾಗಿ ನನ್ನ ಸಹ ಆಟಗಾರರು ಹಣಕಾಸಿನ ವಿಚಾರಕ್ಕೆ ಪರದಾಡುವುದನ್ನು ನೋಡಿದ್ದೇನೆ. ದಯಮಾಡಿ ಇವರ ಸಮಸ್ಯೆಯತ್ತ ಬಿಸಿಸಿಐ ಗಮನಹರಿಸುವಂತೆ ಮಾಡಿ’ ಎಂದು ಭಜಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments