ಅಂದು ರವಿಚಂದ್ರನ್ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದ ಹರ್ಭಜನ್ ಸಿಂಗ್ ವರಸೆ ಇಂದು ಬದಲು!

Webdunia
ಶನಿವಾರ, 4 ಆಗಸ್ಟ್ 2018 (09:22 IST)
ಎಡ್ಜ್ ಬಾಸ್ಟನ್: ರವಿಚಂದ್ರನ್ ಅಶ್ವಿನ್ ಭಾರತದ ಪಿಚ್ ಗಳಲ್ಲಿ ವಿಕೆಟ್ ಗಳ ಮೇಲೆ ವಿಕೆಟ್ ಪಡೆಯುವಾಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಟಾಂಗ್ ಕೊಟ್ಟು ವಿವಾದವೆಬ್ಬಸಿದ್ದರು.

ಇಂತಹ ಪಿಚ್ ನಾನು ಮತ್ತು ಅನಿಲ್ ಕುಂಬ್ಳೆ ಜತೆಯಾಗಿ ಆಡುವಾಗ ಸಿಕ್ಕರೆ ಇದಕ್ಕಿಂತ ಹೆಚ್ಚು ವಿಕೆಟ್ ಕೀಳುತ್ತಿದ್ದೆವು ಎಂದು ಅಂದು ಭಜಿ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದರು. ಭಜಿಯ ಈ ಹೇಳಿಕೆ ಅಂದು ಭಾರೀ ವಿವಾದ ಸೃಷ್ಟಿಸಿತ್ತು. ಅದಾದ ಬಳಿಕ ಇಬ್ಬರೂ ಕ್ರಿಕೆಟಿಗರೂ ತಮ್ಮ ನಡುವೆ ಯಾವುದೇ ವೈಮನಸ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲಷ್ಟೇ ವಿವಾದ ತಣ್ಣಗಾಯಿತು.

ಇಂದು ಇಂಗ್ಲೆಂಡ್ ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಕಿತ್ತ ಮೇಲೆ ಹರ್ಭಜನ್ ಅವರನ್ನು ಹಾಡಿ ಹೊಗಳಿದ್ದಾರೆ. ವೈವಿದ್ಯಮಯ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದ್ದ ಅಶ್ವಿನ್ ರನ್ನು ಭರಪೂರ ಹೊಗಳಿರುವ ಭಜಿ ‘ಉಪಖಂಡದ ಹೊರತಾದ ಪಿಚ್ ನಲ್ಲಿ ಅಶ್ವಿನ್ ಮಾಡಿದ ಅತ್ಯದ್ಭುತ ಬೌಲಿಂಗ್ ಇದಾಗಿತ್ತು’ ಎಂದು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ZIM VS IND T20I: ಸತತ ಎರಡನೇ ಪಂದ್ಯದಲ್ಲೂ ಎಡವಿದ ಸ್ಟಾರ್ ಬ್ಯಾಟರ್‌, ಅಭಿಷೇಕ್ ಶರ್ಮಾ ಅವರನ್ನು ಕೈಬಿಡಲಾಗುವುದೇ

India vs Zimbabwe 2nd T20I: ಟಾಸ್‌ ಗೆದ್ದ ಜಿಂಬಾಬ್ವೆ, ಬೌಲಿಂಗ್ ಆಯ್ಕೆ

ಭಾರತ ಪುರುಷ, ಮಹಿಳಾ ಕ್ರಿಕೆಟ್‌ ತಂಡಗಳಿಗೆ ಖುಲಾಯಿಸಿದ ಅದೃಷ್ಟ: ಏಷ್ಯನ್‌ ಗೇಮ್ಸ್‌ನಲ್ಲಿ ನೇರ ಕ್ವಾರ್ಟರ್‌ಗೆ

ಗೌತಮ್ ಗಂಭೀರ್ ಇಲ್ಲದ್ದಕ್ಕೇ ಟೀಂ ಇಂಡಿಯಾ ಗೆದ್ದಿದ್ದು: ಫುಲ್ ಟ್ರೋಲ್

IND VS ZIM: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿ ಟಿ20 ಸೋಲಿನ ಸರಣಿಗೆ ಅಂತ್ಯ ಹಾಡಿದ ಭಾರತ

ಮುಂದಿನ ಸುದ್ದಿ
Show comments