Select Your Language

Notifications

webdunia
webdunia
webdunia
webdunia

ಪಿಚ್ ವಿವಾದ ಬಗೆಹರಿಸಿಕೊಂಡ ಅಶ್ವಿನ್- ಭಜ್ಜಿ

ಪಿಚ್ ವಿವಾದ ಬಗೆಹರಿಸಿಕೊಂಡ ಅಶ್ವಿನ್- ಭಜ್ಜಿ
Bangalore , ಮಂಗಳವಾರ, 18 ಅಕ್ಟೋಬರ್ 2016 (09:34 IST)
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಾಧನೆಗೆ ಸ್ಪಿನ್ ಸ್ನೇಹಿ ಪಿಚ್ ಕಾರಣ ಎಂದು ವಿವಾದಕ್ಕೀಡಾಗಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವಿಟರ್ ಮೂಲಕ ಅಶ್ವಿನ್ ಜತೆಗಿನ ವಿವಾದ ಬಗೆಹರಿಸಿಕೊಂಡಿದ್ದಾರೆ.

ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಅಶ್ವಿನ್ ಬಗ್ಗೆ ಎಲ್ಲರೂ ಹೊಗಳುತ್ತಿರಬೇಕಾದರೆ, ಭಜಿ ಮಾತ್ರ “ಇಂತಹ ಸ್ಪಿನ್ ಸ್ನೇಹಿ ಪಿಚ್ ನನಗೆ ಸಿಗುತ್ತಿದ್ದರೆ, ಇದಕ್ಕಿಂತ ಬೇಗ ಪಂದ್ಯ ಮುಗಿಸಿಕೊಡುತ್ತಿದ್ದೆ. ಆದರೆ ನನಗೆ ಮತ್ತು ಅನಿಲ್ ಕುಂಬ್ಳೆಗೆ ಈ ಭಾಗ್ಯವಿರಲಿಲ್ಲ’ ಎನ್ನುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದು ವಿವಾದವಾಗುತ್ತಿದ್ದಂತೆ, ಸ್ವತಃ ಅಶ್ವಿನ್ ನನ್ನ ಮತ್ತು ಭಜಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇದನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ತಕ್ಷಣವೇ ಅಶ್ವಿನ್ ಗೆ ಪ್ರತಿಕ್ರಿಯಿಸಿರುವ ಹರ್ಭಜನ್  “ನಿಮ್ಮ ಮೇಲೆ ನನಗೆ ಯಾವುದೇ ವೈರುಧ್ಯವಿಲ್ಲ. ಸದಾ ನಿಮ್ಮ ಒಳಿತನ್ನೇ ಬಯಸುತ್ತೇನೆ” ಎಂದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸೈನಾ ನೆಹ್ವಾಲ್ ಈಗ ಡಾಕ್ಟರ್!!