Webdunia - Bharat's app for daily news and videos

Install App

ಅತಿ ವೇಗದ ದ್ವಿಶತಕ: ಶಾಸ್ತ್ರಿ ದಾಖಲೆಯನ್ನು ಸಮಗೊಳಿಸಿದ ಗ್ಲಾಮೊರ್ಗನ್ ಡೊನಾಲ್ಡ್

Webdunia
ಸೋಮವಾರ, 18 ಜುಲೈ 2016 (13:15 IST)
ಕಾಲ್ವಿನ್ ಬೇ(ಯುಕೆ): ಗ್ಲಾಮೋರ್ಗನ್ ಹದಿಹರೆಯದ ಬಾಲಕ ಅನೆರಿನ್ ಡೊನಾಲ್ಡ್ ಡರ್ಬಿಶೈರ್ ವಿರುದ್ಧ ಭಾನುವಾರ ಅಚ್ಚರಿಯ ಇನ್ನಿಂಗ್ಸ್ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕದ ದಾಖಲೆಯನ್ನು ಸಮಗೊಳಿಸಿದ್ದಾರೆ. ಡೊನಾಲ್ಡ್ ಸ್ಕೋರ್‌ನಲ್ಲಿ 15 ಸಿಕ್ಸರ್‌ಗಳಿದ್ದು, 123 ಎಸೆತಗಳಲ್ಲಿ 200 ರನ್ ಸ್ಕೋರ್ ಮಾಡುವ ಮೂಲಕ 1985ರಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್ ರವಿಶಾಸ್ತ್ರಿ ಸ್ವದೇಶದಲ್ಲಿ ಸಾಧಿಸಿದ ದಾಖಲೆಗೆ ಸರಿಸಮವಾಗಿ ಡೊನಾಲ್ಡ್ ಸ್ಕೋರ್ ಮಾಡಿದ್ದಾರೆ.
 
 
19 ವರ್ಷದ ಬಾಲಕ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ  ತನ್ನ ತಂಡ 96ಕ್ಕೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಡಲಿಳಿದ ತಕ್ಷಣವೇ ಬ್ಯಾಟಿಂಗ್ ದಾಳಿ ಆರಂಭಿಸಿ ಚೊಚ್ಚಲ ಶತಕವನ್ನು ಸಿಕ್ಸರ್ ಸಿಡಿಸುವ ಮೂಲಕ ಮುಟ್ಟಿದರು. 100ರ ಗಡಿಯಿಂದ 200ರ ಗಡಿಯನ್ನು ಮುಟ್ಟಲು ಅವರು ಕೇವಲ 43 ಎಸೆತಗಳನ್ನು ಮಾತ್ರ ತೆಗೆದುಕೊಂಡರು.
 
ರವಿ ಶಾಸ್ತ್ರಿ ಅವರ ಹಿಂದಿನ ದಾಖಲೆಯನ್ನು ಸಮಗೊಳಿಸಿದ್ದಕ್ಕಾಗಿ ಸಂತಸವಾಗಿದೆ ಎಂದು ಡೊನಾಲ್ಡ್ ಹೇಳಿದರು. ಡೊನಾಲ್ಡ್  ತಮ್ಮ 150 ಮತ್ತು 200 ರನ್ ಗಡಿಯನ್ನು ಸಿಕ್ಸರುಗಳ ಮೂಲಕ ದಾಟಿ 136 ಎಸೆಗಳಲ್ಲಿ 234 ರನ್ ಸಿಡಿಸಿದರು. ಗ್ಲಾಮೋರ್ಗನ್ ಮೊದಲ ದಿನ 8ವಿಕೆಟ್ ಕಳೆದುಕೊಂಡು 491 ರನ್ ಗಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments