Select Your Language

Notifications

webdunia
webdunia
webdunia
webdunia

ದೆವ್ವದ ಕಾಟಕ್ಕೆ ಆನಾರೋಗ್ಯಕ್ಕೀಡಾದ ಕ್ರಿಕೆಟಿಗ!

ದೆವ್ವದ ಕಾಟಕ್ಕೆ ಆನಾರೋಗ್ಯಕ್ಕೀಡಾದ ಕ್ರಿಕೆಟಿಗ!
ಕರಾಚಿ , ಮಂಗಳವಾರ, 27 ಜನವರಿ 2015 (12:37 IST)
ವಿಶ್ವಕಪ್‌ಗೆ ಮುನ್ನ ಏಕದಿನ ಪಂದ್ಯಗಳನ್ನಾಡಲು ನ್ಯೂಜಿಲೆಂಡ್ ತಲುಪಿರುವ ಪಾಕಿಸ್ತಾನಿ ಆಲ್ ರೌಂಡರ್ ಹ್ಯಾರಿಸ್ ಸೊಹೈಲ್ ಅನಾರೋಗ್ಯಕ್ಕೀಡಾಗಿದ್ದಾರೆ. ಅವರ ಆರೋಗ್ಯ ಬಿಗಡಾಯಿಸಲು ಕಾರಣವೇನು ಅಂತೀರಾ?  ಭೂತದ ಕಾಟ.
ತಾವು ಉಳಿದುಕೊಂಡಿರುವ ಕೋಣೆಯಲ್ಲಿ ದೆವ್ವವಿದೆ ಎಂದು ಅವರು ದೂರುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ ಮಧ್ಯರಾತ್ರಿಯಲ್ಲಿ ಸೊಹೈಲ್‌ಗೆ ಸಡನ್ನಾಗಿ ಎಚ್ಚರವಾಯಿತು. ಆಗ ತನ್ನ ಕೋಣೆಯಲ್ಲಿ ದೆವ್ವ ಓಡಾಡುತ್ತಿರುವುದನ್ನು ಅವರು ಕಂಡರಂತೆ.  ಹೊಟೆಲ್ ಸಿಬ್ಬಂದಿಗಳನ್ನು ಸಂಪರ್ಕಿಸಿದ ಅವರು ತನಗೆ ಬೇರೊಂದು ಕೋಣೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಭಯಭೀತರಾಗಿದ್ದ ಅವರು ಅದಾಗಲೇ ಅನಾರೋಗ್ಯ ಪೀಡಿತರಾಗಿದ್ದರು ಎಂದು ತಿಳಿದು ಬಂದಿದೆ. 
 
ಅಂತರಾಷ್ಟ್ರೀಯ ಕ್ರಿಕೆಟಿಗನೊಬ್ಬ ತನ್ನ ಕೋಣೆಯಲ್ಲಿ ಭೂತವಿದೆ ಎಂದು ದೂರು ನೀಡುತ್ತಿರುವುದು ಇದೇ ಮೊದಲು. ಪಾಕ್ ಕ್ರಿಕೆಟಿಗರು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ದುರ್ವರ್ತನೆಯಿಂದ ಸುದ್ದಿಯಲ್ಲಿರುತ್ತಾರೆ. ಆದರೆ ಸೊಹೈಲ್ ಭೂತದ ಕಾಟ ಎಂದು ಹೇಳಿ ಸುದ್ದಿ ಸೃಷ್ಟಿಸಿದ್ದಾರೆ. 

Share this Story:

Follow Webdunia kannada