Webdunia - Bharat's app for daily news and videos

Install App

ದ್ವೇಷ ಮರೆತು ಗಂಭೀರ್‌ಗೆ ಮಣೆ ಹಾಕುತ್ತಾರಾ ಕೊಹ್ಲಿ?

Webdunia
ಶುಕ್ರವಾರ, 30 ಸೆಪ್ಟಂಬರ್ 2016 (10:26 IST)
ಎರಡು ವರ್ಷದ ವನವಾಸದ ಬಳಿಕ ತಂಡಕ್ಕೆ ಮರಳಿರುವ ಉತ್ಸಾಹದಲ್ಲಿರುವ ಆರಂಭಿಕ ಆಟಗಾರ ಗೌತಮ್ ಗಂಭೀರ್ ಎರಡನೆಯ ಟೆಸ್ಟ್‌ನಲ್ಲಿ ಆಡುವ ಆತುರದಲ್ಲಿದ್ದಾರೆ. ತಂಡಕ್ಕೇನೋ ಸೇರ್ಪಡೆಯಾಗಿ ಆಗಿದೆ. ಆದರೆ 11 ಜನರ ತಂಡದಲ್ಲಿ ಗೌತಮ್‌ ಅವರಿಗೆ ಸ್ಥಾನ ಸಿಗುತ್ತಾ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

ಐಪಿಎಲ್ ಮತ್ತು ದುಲೀಪ್ ಟ್ರೋಫಿಯಲ್ಲಿ ರನ್ ಹೊಳೆ ಹರಿಸಿದ್ದ ಗೌತಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ತಮಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಅವರ ನಂಬಿಕೆ ಹುಸಿಯಾಗಿತ್ತು. ಬಳಿಕ ಕರ್ನಾಟಕ ಮೂಲದ ಕೆ. ಎಲ್ ರಾಹುಲ್
ಗಾಯಗೊಂಡು ತಂಡದಿಂದ ಹೊರಕ್ಕೆ ಹೋಗಿದ್ದು ಗಂಭೀರ್ ಅವರಿಗೆ ಅವಕಾಶ ದೊರೆಯುವಂತೆ ಮಾಡಿತು. ಆದರೆ ಅವರ ಅದೃಷ್ಟದ ಬಾಗಿಲು ತೆರೆಯುವುದಿನ್ನು ಕೊಹ್ಲಿ ಕೈಯ್ಯಲ್ಲಿದೆ. 
 
ನಿಜ ಹೇಳಬೇಕೆಂದರೆ ಗಂಭೀರ್ ಮತ್ತೆ ತಂಡ ಸೇರುವುದು ಕ್ಯಾಪ್ಟನ್ ಕೊಹ್ಲಿಗೆ ಇಷ್ಟವಿರಲಿಲ್ಲ. ಹಾಗಿದ್ದರೆ ಕಳಪೆ ಫಾರ್ಮ್‌ನಲ್ಲಿರುವ ಧವನ್ ಬದಲು ಮೊದಲೇ ಅವರು ಗಂಭೀರ್ ಅವರನ್ನು ಆಯ್ಕೆ ಮಾಡುತ್ತಿದ್ದರು. 
 
ಧೋನಿ ಮೇಲೆ ಕಿಡಿಕಾರುವ ಗಂಭೀರ್ ಅವರು ಕೊಹ್ಲಿಯೊಂದಿಗೂ ಸಹ ಕಹಿ ಸಂಬಂಧವನ್ನು ಹೊಂದಿದ್ದಾರೆ. ಸಮಯ ಸಿಕ್ಕಾಗಲೆಲ್ಲೆ ಕೊಹ್ಲಿಗೆ ಅವರು ಟಾಂಗ್ ನೀಡುತ್ತಲೇ ಬಂದಿದ್ದಾರೆ.  2013ರಲ್ಲಿ ಐಪಿಎಲ್ ಸೀಸನ್ 6ರಲ್ಲಿ ಕೂಡ ಗೌತಿ ಕೊಹ್ಲಿ ಅತಿಯಾದ ಅಗ್ರೆಸ್ಸಿವ್‌ನಿಂದ ಕೆಣಕಿ ಜಗಳ ಮಾಡಿಕೊಂಡಿದ್ದರು. ಗಂಭೀರ್ ಜತೆಗಿನ ಜಗಳ ಮರೆತು ಸಹಜವಾಗಿರಲು ಕೊಹ್ಲಿ ಯತ್ನಿಸದರಾದರೂ ಗಂಭೀರ್ ಮಾತ್ರ ದ್ವೇಷವನ್ನು ಪದೇ ಪದೇ ಹೊರ ಹಾಕುತ್ತಲೇ ಬಂದಿದ್ದಾರೆ. ಇಂದಿನ ಪಂದ್ಯದಲ್ಲಿ ಗೌತಿ ಬದಲು ಧವನ್‌ಗೆ ಚಾನ್ಸ್ ನೀಡುವ ಮನಸ್ಸು ಕೊಹ್ಲಿಯದು. 
 
ಅದೇನೇ ಇರಲಿ, ಐತಿಹಾಸಿಕ 250 ನೇ( ತವರು ನೆಲದಲ್ಲಿ)  ಪಂದ್ಯದಲ್ಲಿ ಗೌತಿ ಆಡುತ್ತಾರಾ ಎಂಬುದು ಇನ್ನು ಕೆಲವೇ ಸಮಯದಲ್ಲಿ  ತಿಳಿದು ಬರಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ