Webdunia - Bharat's app for daily news and videos

Install App

ಕೊಹ್ಲಿಯನ್ನು ಕೊಂಡಾಡಿದ ಕರ್ಸ್ಟನ್

Webdunia
ಶನಿವಾರ, 10 ಸೆಪ್ಟಂಬರ್ 2016 (15:11 IST)
ವಿರಾಟ್ ಕೊಹ್ಲಿ ಮೈದಾನದಲ್ಲಿರುವಾಗ ಪ್ರೇರಣಾದಾಯಕ ನಾಯಕನಂತೆ ಗೋಚರಿಸುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಟೆಸ್ಟ್ ಕಪ್ತಾನ್‌ನ್ನು ಹಾಡಿ ಹೊಗಳಿದ್ದಾರೆ.

ಜೈಪುರಕ್ಕೆ ಆಗಮಿಸಿದ್ದ ಕರ್ಸ್ಟನ್ ಪಿಟಿಐ ಜತೆ ಮಾತನ್ನಾಡುತ್ತ, ವಿರಾಟ್ ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ಮಹಾನ್ ನಾಯಕ. ಅವರ ಪ್ರತಿಭೆ ಪ್ರಶ್ನಾತೀತವಾದುದು. ಆಪ್ ಫೀಲ್ಡ್ ಭರ್ಜರಿ ಪ್ರದರ್ಶನದ ಮೂಲಕ ಅವರು ತಮ್ಮ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಟೆಸ್ಟ್ ವಿಭಾಗದಲ್ಲಿ ಅವರ ನಾಯಕತ್ವ ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಅವರ ಬಗ್ಗೆ ಹೇಳಬೇಕಾದ ಅತ್ಯಂತ ಮಹತ್ವದ ಸಂಗತಿ ಎಂದರೆ ಮೈದಾನದಲ್ಲಿರುವಾಗ ಅವರು ಪ್ರೇರಣಾದಾಯಕ ನಾಯಕನಂತೆ ಗೋಚರಿಸುತ್ತಾರೆ ಎಂದಿದ್ದಾರೆ. 
 
ಆದರೆ ತಾವು ಕೋಚ್ ಆಗಿದ್ದಾಗ ಮೂರು ರೂಪದ ತಂಡಕ್ಕೆ ನಾಯಕರಾಗಿದ್ದ ಧೋನಿ ಮತ್ತು ವಿರಾಟ್ ನಡುವಿನ ನಾಯಕತ್ವದ ಗುಣಗಳನ್ನು ಹೋಲಿಸಲು ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರ ಕರ್ಸ್ಟನ್ ನಿರಾಕರಿಸಿದರು. 
 
ಧೋನಿ ಅತ್ಯುತ್ತಮ  ನಾಯಕ. ಅವರ ಜತೆ ಕೆಲಸ ಮಾಡುವಾಗ ನಾನು ನಿಜಕ್ಕೂ ತುಂಬಾ ಖುಷಿ ಪಟ್ಟಿದ್ದೇನೆ. ಆದರೆ ಮೂರು ರೀತಿಯ ಕ್ರಿಕೆಟ್ ರೂಪದಲ್ಲಿ ಭಾರತ ತಂಡದ ಪ್ರದರ್ಶನವನ್ನು ನಾನು ನಿರಂತರವಾಗಿ ವೀಕ್ಷಿಸಿಲ್ಲವಾದ್ದರಿಂದ ಕೊಹ್ಲಿ ಮತ್ತು ಧೋನಿಯನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments