Select Your Language

Notifications

webdunia
webdunia
webdunia
webdunia

ಏಕದಿನ ಸರಣಿಯಲ್ಲಾದರೂ ಕಮಾಲ್‌ ಮಾಡುತ್ತಾ ಟೀಮ್‌ ಇಂಡಿಯಾ?

ಏಕದಿನ ಸರಣಿಯಲ್ಲಾದರೂ ಕಮಾಲ್‌ ಮಾಡುತ್ತಾ ಟೀಮ್‌ ಇಂಡಿಯಾ?
ನವದೆಹಲಿ , ಸೋಮವಾರ, 25 ಆಗಸ್ಟ್ 2014 (18:16 IST)
ಟೆಸ್ಟ್‌ ಸರಣಿಯಲ್ಲಿ ಸತತ ಸೋಲನುಭವಿಸಿದ ಟೀಮ್‌ ಇಂಡಿಯಾ ಇಂದಿನಿಂದ ಇಂಗ್ಲೆಂಡ್‌‌ ವಿರುದ್ದ ಪ್ರಾರಂಭವಾಗುವ ಐದು ದಿನಗಳ ಏಕದಿನ ಸರಣಿಯಲ್ಲಿ ಹೊಸ ಶುಭಾರಂಭ ಮಾಡಲು ಮತ್ತು ಪ್ರತಿಷ್ಠೆಯನ್ನು ಮರಳಿ ಪಡೆಯಲು ಮೈದಾನಕ್ಕೆ ಇಳಿಯಲಿದೆ. 
 
ಒಂದು ಕಡೆ ಟೀಮ್‌ ಇಂಡಿಯಾ ಟೆಸ್ಟ್‌‌ ಸರಣಿಯಲ್ಲಿ 1-3 ಅಂತರದಿಂದ ಸೋತ ಬಳಿಕ ಹೊಸ ಶುಭಾರಂಭ ಮಾಡಲು ಮತ್ತು ಹಳೆಯ ಪ್ರತಿಷ್ಠೆಯನ್ನು ಮರಳಿ ಪಡೆಯಲು ಮೈದಾನಕ್ಕೆ ಇಳಿದರೆ, ಇನ್ನೊಂದು ಕಡೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌‌‌ಗಾಗಿ ತಂಡ ಪ್ರಬಲವಾಗುವತ್ತ ಕೂಡ ಗಮನ ನೀಡಬೇಕಾಗಿದೆ. 
 
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌‌‌ಗೆ ಇನ್ನು ಆರು ತಿಂಗಳು ಬಾಕಿ ಇದೆ ಮತ್ತು ಇಂದಿನಿಂದ ಭಾರತೀಯ ತಂಡ ಯಾವುದೇ ಒನ್‌ಡೇ ಪಂದ್ಯವಾಡಿದರೆ 2011ರ ಗೆಲುವನ್ನು ರಕ್ಷಣೆಗಾಗಿ ಹೊಸ ಹೆಜ್ಜೆಯಿಟ್ಟಂತಾಗಲಿದೆ. ಟೀಮ್‌‌ ಇಂಡಿಯಾದ ಹತ್ತಿರ ವಿಶ್ವಕಪ್‌‌‌‌‌‌ಗಿಂತ ಮೊದಲು ಮೂರು ಒನ್‌ಡೇ ಸರಣಿಯಲ್ಲಿ ತನ್ನ ಆಟಗಾರರ ಪ್ರತಿಭೆ, ಸಾಮರ್ಥ್ಯವನ್ನು ಅಳೆಯುವಂತಹ ಸುವರ್ಣಾವಕಾಶವಿದೆ.
 
ಈ ಮೂರು ಸರಣಿಗಳಲ್ಲಿ ಇಂಗ್ಲೆಂಡ್‌‌‌ ವಿರುದ್ದ ಸ್ವದೇಶದಲ್ಲಿ ವೆಸ್ಟ್‌‌ ಇಂಡೀಸ್‌‌‌ ವಿರುದ್ದದ ಸರಣಿ ಮತ್ತು ಆಸ್ಟ್ರೇಲಿಯಾದ ವಿರುದ್ದ ತ್ರಿಕೋನ ಸರಣಿ ನಡೆಯಲಿದೆ. ಭಾರತೀಯ ಆಯ್ಕೆ ಸಮಿತಿ ಮೊದಲೇ ತಂಡದ ಸಂಭವನೀಯ ಪಟ್ಟಿ ಸಿದ್ದಪಡಿಸಿದೆ ಮತ್ತು 17 ಸದಸ್ಯರ ತಂಡ ಇವರ ಮನಸ್ಸಿನಲ್ಲಿ ಹರಿದಾಡುತ್ತಿದೆ. 
 
ಸಂಜು ಸ್ಯಾಮಸನ್‌‌ ಮತ್ತು ಕರ್ಣ ಶರ್ಮಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ತಂಡದಲ್ಲಿ ಹೆಚ್ಚುವರಿಯಾಗಿ ವಿಕೆಟ್‌ ಕೀಪರ್‌, ಬ್ಯಾಟ್ಸಮೆನ್‌, ಸ್ಪಿನರ್‌‌‌ ಬೌಲರ್‌‌ ಮತ್ತು ಆಲ್‌‌‌ರೌಂಡರ್‌‌‌‌ ಆಟಗಾರರ ಹುಡುಕಾಟದಲ್ಲಿರುವ ಆಯ್ಕೆ ಸಮಿತಿ ಯಾರಿಗೆ ಅವಕಾಶ ಕೊಡುತ್ತದೆಯೋ ಎನ್ನುವ ಬಗ್ಗೆ ಕಾದು ನೋಡಬೇಕಾಗಿದೆ. 

Share this Story:

Follow Webdunia kannada