Select Your Language

Notifications

webdunia
webdunia
webdunia
webdunia

ಕೊನೆಯುಸಿರೆಳೆದ ಮಾಜಿ ಕ್ರಿಕೆಟಿಗ ಕಾನಿಟ್ಕರ್

ಕೊನೆಯುಸಿರೆಳೆದ ಮಾಜಿ ಕ್ರಿಕೆಟಿಗ ಕಾನಿಟ್ಕರ್
ಮುಂಬೈ , ಗುರುವಾರ, 11 ಜೂನ್ 2015 (11:33 IST)
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಮಾಜಿ ಟೆಸ್ಟ್‌ ಕ್ರಿಕೆಟರ್ ಹೇಮಂತ್ ಕಾನಿಟ್ಕರ್ ಕೊನೆಯುಸಿರೆಳೆದಿದ್ದಾರೆ. ಪುಣೆಯಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ಅವರು ನಿಧನರಾಗಿದ್ದಾರೆ.  72 ವರ್ಷ ವಯಸ್ಸಿನ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅವರು ಅಗಲಿದ್ದಾರೆ. ಅವರ ಪುತ್ರ ಹೃಷಿಕೇಶ್ ಕಾನಿಟ್ಕರ್ ಸಹ ಮಾಜಿ ಕ್ರಿಕೆಟಿಗರಾಗಿದ್ದಾರೆ. 

ಸ್ಪೋಟಕ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಆಗಿದ್ದ ಅವರು ಹದಿನೈದು ವರ್ಷಗಳ ಕಾಲ ( 1963-64, 1977-78ರ ಅವಧಿ) ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು. ಜತೆಗೆ ರಾಷ್ಟ್ರೀಯ ತಂಡದಲ್ಲೂ ಮಿಂಚಿದ್ದರು. 1974-75ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದರು. 
 
ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 13 ಶತಕಗಳು ಸೇರಿದಂತೆ 5,007 ರನ್ ಗಳಿಸಿದ್ದ ಅವರು ವಿಕೆಟ್ ಕೀಪಿಂಗ್‌ನಲ್ಲಿ 87 ಬಲಿ ತೆಗೆದುಕೊಂಡಿದ್ದರು. ರಣಜಿಯಲ್ಲಿ ಸಹ ಇವರ ಬ್ಯಾಟಿಂಗ್‌ನಿಂದ 3,632 ರನ್ ಗಳು ಹರಿದು ಬಂದಿದ್ದವು.  ರಾಜಸ್ಥಾನ ವಿರುದ್ಧ ಪಂದ್ಯವೊಂದರಲ್ಲಿ ಅವರು 250 ರನ್‌ಗಳ ಜೀವನಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. 
 
1977-78 ರಲ್ಲಿ ಪ್ರಥಮದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ ಇವರು ಮಹಾರಾಷ್ಟ್ರ ತಂಡದ ಕೋಚ್, ಆಯ್ಕೆದಾರರಾಗಿ ಜತೆಗೆ ಬಿಸಿಸಿಐನ ಆಲ್ ಇಂಡಿಯಾ ಜ್ಯೂನಿಯರ್ ಸೆಲಕ್ಷನ್ ಕಮಿಟಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಕ್ರಿಕೆಟಿಗನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ  ಧೈರ್ಯವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. 
 
"ಅವರೊಬ್ಬ ನುರಿತ ಬ್ಯಾಟ್ಸ‌ಮನ್ ಮತ್ತು ಪಳಗಿದ ವಿಕೆಟ್ ಕೀಪರ್ ಆಗಿದ್ದರು. ತಮ್ಮ ಪ್ರಾರಂಭದ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರನ್ನು ಕೇವಲ ಎರಡು ಟೆಸ್ಟ್‌ಗಳಿಗೆ ಏಕೆ ಸೀಮಿತಗೊಳಿಸಲಾಯಿತೆಂಬುದು ಉತ್ತರ ತಿಳಿಯದ ಪ್ರಶ್ನೆಯಾಗಿಯೇ ಉಳಿದಿದೆ", ಎಂದು ಮಾಜಿ ಕ್ರಿಕೆಟಿಗ ಚಂದು ಬೋರ್ಡೆ ತಿಳಿಸಿದ್ದಾರೆ. 

Share this Story:

Follow Webdunia kannada